ತಿರುವನಂತಪುರಂ: ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ತಡೆಯಲು ಕೇರಳ ಪೋಲೀಸರು ಡ್ರೋನ್ ತಪಾಸಣೆ ಆರಂಭಿಸಿದ್ದಾರೆ. 250 ಗ್ರಾಂ ತೂಕದ ನ್ಯಾನೊ ಮಾದರಿಯ ಡ್ರೋನ್ ಬಳಸಿ ಪರೀಕ್ಷೆ ನಡೆಸಲಾಗಿದೆ.
ಪ್ರತಿ ಠಾಣೆಗಳಲ್ಲಿ ಡ್ರಗ್ಸ್ ಸಂಬಂಧಿಸಿದ ಎನ್.ಡಿ.ಪಿ.ಎಸ್. ಪ್ರಕರಣಗಳ ಮೇಲೆ ಮೊದಲ ಗಮನವಿರಲಿದೆ. ಕಣ್ಣೂರು ನಗರ, ಕಾಸರಗೋಡು ಪೋಲೀಸ್ ವ್ಯಾಪ್ತಿಯ 23 ಠಾಣೆಗಳ ಪೈಕಿ ಏಳು ಠಾಣೆಗಳಲ್ಲಿ ಡ್ರೋನ್ ತಪಾಸಣೆ ನಡೆಸಲಾಗಿದೆ. ಗ್ರಾಮಾಂತರ ಪೆÇಲೀಸ್ ವ್ಯಾಪ್ತಿಯ 19 ಠಾಣೆಗಳ ಪೈಕಿ ಮೂರು ಠಾಣೆಗಳಲ್ಲಿ ತಪಾಸಣೆ ಪೂರ್ಣಗೊಂಡಿದೆ.
ಗಸ್ತು ಕೇಂದ್ರಗಳು ಅಲ್ಲಿ ಅಮಲು ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುತ್ತಿರುವುದನ್ನು ಪತ್ತೆಮಾಡಿದೆ. ಬಸ್ ನಿಲ್ದಾಣ ಪ್ರದೇಶಗಳು ಮತ್ತು ಪಾರ್ಕಿಂಗ್ ಪ್ರದೇಶಗಳ ಮೇಲೆ ನಿಗಾ ಇಡಲಾಗುವುದು. ಅದರ ಸ್ಥಳದ ವಿಡಿಯೋ ಮತ್ತು ಪೋಟೋವನ್ನು ಆಯಾ ಪೋಲೀಸ್ ಠಾಣೆಗಳಿಗೆ ರವಾನಿಸಲಾಗುತ್ತದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಡಿಯಲ್ಲಿ ತರಬೇತಿ ಪಡೆದ 45 ಪೋಲೀಸ್ ಸಿಬ್ಬಂದಿ ರಾಜ್ಯದಲ್ಲಿ ಪೋಲೀಸ್ ಡ್ರೋನ್‍ಗಳನ್ನು ನಿರ್ವಹಿಸುತ್ತಿದ್ದಾರೆ. ಸೈಬರ್ ಡೋಮ್‍ನ ಉಸ್ತುವಾರಿ ಐಜಿ. ಪ. ಪ್ರಕಾಶ್ ಅವರು ರಾಜ್ಯ ಮಟ್ಟದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.