ಬೆಂಗಳೂರು: ಭಾರತದ ರಕ್ಷಣಾ ನೀತಿ ಅತ್ಯಂತ ಸ್ಥಿರವಾಗಿದೆ. ದೇಶದ ಹಿತಾಸಕ್ತಿ ರಕ್ಷಣೆಗೆ ಬದ್ಧವಾಗಿದೆಯೇ ಹೊರತು ಬೇರೆ ಕೆಲವು ದೇಶಗಳ ರೀತಿ ಆಕ್ರಮಣಕಾರಿಯಲ್ಲ ಎಂದು ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಖ್ಯಾತ ಪತ್ರಕರ್ತ ಎಂ.ಜೆ.ಅಕ್ಬರ್ ವಿಶ್ಲೇಷಿಸಿದರು.

ವಾಡಿಯಾ ಸಭಾಂಗಣದಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿಗಳು ಮತ್ತು ಯುವಜನರ ಜಾಗತಿಕ ಸಂಘಟನೆ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಿದ್ದ ' ಯೂಕ್ರೇನ್ ನಲ್ಲಿ ಯುರೋಪ್ ಯುದ್ಧ, ಏಷ್ಯಾದ ಮೇಲೆ ಪರಿಣಾಮಗಳು ಕುರಿತು ಸಂವಾದ'ದಲ್ಲಿ ಪಾಲ್ಗೊಂಡು ಅವರು ಉತ್ತರಿಸಿದರು.
ಪುಲ್ವಾಮಾ ದುಷ್ಕೃತ್ಯಕ್ಕೆ ಪ್ರತಿಯಾಗಿ ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯು ನೆರೆಯ ದೇಶಕ್ಕೆ ನಿನ್ನ ಮಿತಿ ನೀನು ಅರಿತಿಕೋ ಎಂಬ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸುವುದಾಗಿತ್ತು ಎಂದರು.
ಸೃಷ್ಟಿಸಿದ ಯುದ್ಧ
ಅಮೆರಿಕ ಹಾಗೂ ಪಶ್ಚಿಮ ಏಷ್ಯಾದ ಎರಡು ನಿಷ್ಠ ಬಣಗಳ ಸೃಷ್ಟಿಯೇ ಯೂಕ್ರೇನ್ ಯುದ್ಧ. ಈ ವಿದ್ಯಮಾನದಲ್ಲಿ ಭಾರತ ಮತ್ತು ಚೀನಾ ದೂರ ಅಂತರ ಕಾಯ್ದುಕೊಂಡಿವೆ. ಆದರೂ ವಿಶ್ವದ ಸೂಪರ್ ಪವರ್ ಆಗಬೇಕೆಂಬ ವಾಂಛೆಯಲ್ಲಿರುವ ಚೀನಾ ಭೌಗೋಳಿಕ ವ್ಯೂಹಾತ್ಮಕ ನಕ್ಷೆಯನ್ನು ಮರು ರಚನೆಗೆ ಮುಂದಾಗಿದ್ದು, ಭಾರತವನ್ನು ಬದಿಗೆ ತಳ್ಳುವ ಅದರ ಪ್ರಯತ್ನ ಫಲಪ್ರದವಾಗುವುದಿಲ್ಲ ಎಂದರು.
ರಷ್ಯಾ ಮತ್ತು ಅಮೆರಿಕ ಪರಸ್ಪರ ದುರ್ಬಲಗೊಳಿಸಲು ಪೈಪೋಟಿಗೆ ಇಳಿದಿದ್ದರೆ ಚೀನಾ ಪ್ರಾಬಲ್ಯ ಮೆರೆಯುವ ತಂತ್ರಗಾರಿಕೆ ರೂಪಿಸುತ್ತಿದೆ. ನ್ಯಾಟೋ ಒಪ್ಪಿಗೆ, ರಷ್ಯಾ ಮೂಲ ಗಡಿಗೆ ಮರಳುವ ತನಕ ಯುಕ್ರೋನ್ ಯುದ್ಧ ನಿಲ್ಲುವುದಿಲ್ಲ ಎಂದು ಎಂ.ಜೆ.ಅಕ್ಬರ್ ಹೇಳಿದರು.