ಕಾಸರಗೊಡು: ಹೆಚ್ಚಿನ ಭಾಷೆಗಳ ಕಲಿಕೆ ಬೌದ್ಧಿಕ ವಿಕಾಸಕ್ಕೆ ಹಾದಿಮಾಡಿಕೊಡುವುದಾಗಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ. ಸಾಲ್ಯಾನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಶನಿವಾರ ಪ್ರೆಸ್ ಕ್ಲಬ್ ವತಿಯಿಂದ ಮಲಯಾಳ ಮಾಧ್ಯಮ ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ ಕನ್ನಡ ಕಲಿಕಾ ತರಗತಿ ಉದ್ಘಟಿಸಿ ಮಾತನಾಡಿದರು.
ಬಹುಭಾಷಾ ಸಂಗಮ ಭೂಮಿಯಾಗಿರುವ ಕಾಸರಗೋಡು ವೈವಿಧ್ಯಮಯ ಸಂಸ್ಕøತಿಯನ್ನು ಹೊಂದಿದೆ. ಕನ್ನಡ ಮತ್ತು ಮಲಯಾಳ ಭಾಷಿಗರ ನಡುವೆ ಭಾಷಾ ಬಾಂಧವ್ಯ ಬೆಸೆಯುವುದರ ಜತೆಗೆ ಈ ಸಂಸ್ಕøತಿ ಪರಸ್ಪರ ಹಂಚಿಕೆಯಗಬೇಕು. ಇದಕ್ಕೆ ಭಾಷೆಯ ಕಲಿಕೆ ಸಹಕಾರಿಯಗಲಿದೆ ಎಂದು ತಿಳಿಸಿದರು. ಪ್ರೆಸ್‍ಕ್ಲಬ್ ಉಪಾಧ್ಯಕ್ಷ ನಹಾಸ್ ಪಿ.ಮಹಮ್ಮದ್ ಅದ್ಯಕ್ಷತೆ ವಹಿಸಿದ್ದರು.
ಶಿಕ್ಷಕಿ ಜಾಹ್ನವಿ ಟೀಚರ್ ಉಪಸ್ಥಿತರಿದ್ದರು. ಪ್ರೆಸ್‍ಕ್ಲಬ್ ಕಾರ್ಯದರ್ಶಿ ಪದ್ಮೇಶ್ ಕೆ.ವಿ ಪ್ರಾಸ್ತಾವಿಕ ಮಾತುಗಳನ್ನಡಿ ಸ್ವಾಗತಿಸಿದರು. ಪ್ರೆಸ್‍ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ಪುರುಷೋತ್ತಮ ಪೆರ್ಲ ವಂದಿಸಿದರು. ಒಟ್ಟು 34ಮಂದಿ ಪತ್ರಕರ್ತರು ಹೆಸರು ನೋಂದಯಿಸಿದ್ದು, ಆರಂಭದ ದಿನದಲ್ಲಿ 14ಮಂದಿ ತರಗತಿಗೆ ಹಾಜರಾಗಿದ್ದರು.