ಕಾಸರಗೋಡು: ಉದುಮ ವೆಟರಿನರಿ ಆಸ್ಪತ್ರೆಯಲ್ಲಿ ಹಿರಿಯ ಪಶು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಇ.ಚಂದ್ರಬಾಬು ಅವರ ಸೇವಾ ವೈಖರಿಗೆ ಪಶುಸಂಗೋಪನಾ ಇಲಾಖೆ ನಿರ್ದೇಶಕರು ಗುಡ್ ಸರ್ವೀಸ್ ಎಂಟ್ರಿ ಅವಾರ್ಡ್‍ಗೆ ನೀಡಿದೆ.
ಗೋ ಸಂರಕ್ಷಣೆಗಾಗಿ ಬದಿಯಡ್ಕ ಗ್ರಾಮ ಪಂಚಾಯಿತಿ ಉಚಿತವಾಗಿ ನೀಡಿದ ಆರು ಎಕರೆ ಜಮೀನಿನಲ್ಲಿ ಬೃಹತ್ ಗೋಶಾಲೆ ಆರಂಭಿಸಲು ನೇತೃತ್ವ ವಹಿಸಿರುವುದು ಇಲಾಖೆಯ ಮನ್ನಣೆಗೆ ಪಾತ್ರವಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಎನಿಮಲ್ ಬರ್ತ್ ಕಂಟ್ರೋಲ್(ಎಬಿಸಿ) ಯೋಜನೆ, ಬೇಡಡ್ಕ ಗ್ರಾಮ ಪಂಚಾಯಿತಿಯಲ್ಲಿ ಆರಂಭಿಸಿರುವ ಆಡುಸಾಕಣೆ ಮುಂತಾದ ಯೋಜನೆಗಳಲ್ಲಿ ವೈದ್ಯರ ಕಾರ್ಯವನ್ನು ಮೌಲ್ಯಮಾಪನ ಮಾಡಲಾಗಿದೆ.