ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ಆ. 25 ರಂದು ವರಮಹಾಲಕ್ಷ್ಮಿ ಪೂಜೆ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಕ್ಷೇತ್ರ ಪೆರಡಾಲದಲ್ಲಿ ಜರಗಿತು. ಆಡಳಿತ ಮಂಡಳಿ ಅಧ್ಯಕ್ಷ ವಕೀಲ. ವೆಂಕಟರಮಣ ಭಟ್ ಚಂಬಲ್ತಿಮಾರ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಜಿ. .ಜಗನ್ನಾಥ ರೈ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಕೋಶಾಧಿಕಾರಿ ವೆಂಕಟ ಗಿರೀಶ್ ಪಟ್ಟಾಜೆ ಆಡಳಿತ ಮಂಡಳಿ ಸದಸ್ಯ ಕೃಷ್ಣ ಬದಿಯಡ್ಕ, ಜಗದೀಶ ಪೆರಡಾಲ, ಮಾಜಿ ಮೊಕ್ತೇಸರ ಪಿ.ಜಿ. ಚಂದ್ರಹಾಸ ರೈ, ಸತೀಶ್ ಕುಮಾರ್, ಗಣೇಶ್ ಭಟ್, ಯುವ ಸಮಿತಿ ಅಧ್ಯಕ್ಷ ಡಾ.ಶ್ರೀಶ ಕುಮಾರ್ ಪಂಜಿತಡ್ಕ, ಕಾರ್ಯದರ್ಶಿ ಭಾಸ್ಕರ. ಪಂಜಿತಡ್ಕ, ಮಾತೃ ಸಮಿತಿ ಉಪಾಧ್ಯಕ್ಷೆ ವಿನಯ ಜೆ ರೈ. ಕಾರ್ಯದರ್ಶಿ ಗೀತಾ, ಕ್ಷೇತ್ರದ ಅರ್ಚಕವೃಂದ, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಮಾತೃ ಸಮಿತಿ ಸದಸ್ಯರು, ಯುವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.