ತಿರುವನಂತಪುರಂ: ರಾಜ್ಯದಲ್ಲಿ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆಯನ್ನು ಬದಲಾಯಿಸಲಾಗಿದೆ. ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸÀಲಾಗಿದೆ.
ಕಳೆದ ಕೆಲವು ದಿನಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತಗಳು, ಹಠಾತ್ ಪ್ರವಾಹಗಳಿಂದ ತಗ್ಗು ಪ್ರದೇಶಗಳು ಮತ್ತು ನಗರಗಳು ಜಲಾವೃತವಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಮತ್ತು ಸರ್ಕಾರಿ ವ್ಯವಸ್ಥೆಗಳು ಅತ್ಯಂತ ಜಾಗರೂಕರಾಗಿರಬೇಕು ಎಂದು ಹವಾಮಾನ ಇಲಾಖೆಯ ಸೂಚನೆಗಳೂ ಹೇಳುತ್ತವೆ.
ಭಾರೀ ಮಳೆಗೆ ಕಣ್ಣೂರಿನ ಅಯ್ಯನ್‍ಕುನ್‍ನಲ್ಲಿ ಬೃಹತ್ ಬಂಡೆಯೊಂದು ರಸ್ತೆಗೆ ಬಿದ್ದಿದೆ. ಆ ಭಾಗಕ್ಕೆ ಸಕಾಲಕ್ಕೆ ವಾಹನ ಬಾರದ ಕಾರಣ ಅಪಘಾತ ತಪ್ಪಿದೆ. ಕಣ್ಣೂರು ಪೆರಿಂಗೋಮ್ ಮತ್ತು ಕಾಸರಗೋಡು ವೆಳ್ಳರಿಕುಂಡ್‍ನಲ್ಲಿ ಇದುವರೆಗೆ 228 ಮಿಮೀ ಮಳೆಯಾಗಿದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ 3.5 ಮೀಟರ್‍ನಿಂದ 4.3 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ ದಕ್ಷಿಣ ಕೇರಳದಲ್ಲಿ ಮಳೆಯಿಂದ ಕೊಂಚ ನಿರಾಳವಾಗಿದೆ.
ರಾಜ್ಯದಲ್ಲಿ ಮಳೆಗೆ ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಂದು ವಾರದೊಳಗೆ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಹನ್ನೊಂದಕ್ಕೆ ಏರಿಕೆಯಾಗಿದೆ. ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿನ್ನೆ ನಾಪತ್ತೆಯಾಗಿದ್ದ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಅಪ್ಪರ್ ಕುಟ್ಟನಾಡ್ ಮತ್ತು ಎರ್ನಾಕುಳಂನಲ್ಲಿ ಇನ್ನೂ ನೂರಾರು ಮನೆಗಳು ಜಲಾವೃತವಾಗಿವೆ. ಮಳೆಗಾಲದಲ್ಲಿ ಭಾಗಶಃ ನಾಶವಾದ ಮನೆಗಳ ಸಂಖ್ಯೆ 150ಕ್ಕೆ ತಲುಪಿದೆ. ವಿವಿಧ ಜಿಲ್ಲೆಗಳಲ್ಲಿ 651 ಕುಟುಂಬಗಳು ಪರಿಹಾರ ಶಿಬಿರಗಳಲ್ಲಿವೆ.