ವಾಷಿಂಗ್ಟನ್: ಮೂರು ದಶಕದಷ್ಟು ಹಳೆಯದಾದ ರಾಸಾಯನಿಕ ಶಸ್ತ್ರಾಸ್ತ್ರ ಒಪ್ಪಂದದ ಪ್ರಕಾರ, ದಾಸ್ತಾನು ಹೊಂದಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಘೋಷಿಸಿದ್ದಾರೆ.
ವಾಷಿಂಗ್ಟನ್: ಮೂರು ದಶಕದಷ್ಟು ಹಳೆಯದಾದ ರಾಸಾಯನಿಕ ಶಸ್ತ್ರಾಸ್ತ್ರ ಒಪ್ಪಂದದ ಪ್ರಕಾರ, ದಾಸ್ತಾನು ಹೊಂದಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಘೋಷಿಸಿದ್ದಾರೆ.
'ದಾಸ್ತಾನಿನಲ್ಲಿ ಬಾಕಿ ಉಳಿದಿದ್ದ ಶಸ್ತ್ರಾಸ್ತ್ರಗಳನ್ನು ಅಮೆರಿಕವು ಸುರಕ್ಷಿತವಾಗಿ ನಾಶಪಡಿಸಿದೆ ಎಂದು ಘೋಷಿಸಲು ಹೆಮ್ಮೆ ಪಡುತ್ತೇನೆ.
1993ರಲ್ಲಿ ಮಾಡಿಕೊಳ್ಳಲಾಗಿದ್ದ ಈ ಒಪ್ಪಂದ 1997ರಲ್ಲಿ ಕಾರ್ಯರೂಪಕ್ಕೆ ಬಂದಿತ್ತು. ಈ ವರ್ಷದ ಸೆಪ್ಟೆಂಬರ್ ಒಳಗಾಗಿ ನಾಶಪಡಿಸುವಂತೆ ರಾಸಾಯನಿಕ ಶಸ್ತ್ರಾಸ್ತ್ರ ನಿಷೇಧ ಸಂಘಟನೆಯು (ಒಪಿಸಿಡಬ್ಲ್ಯು) ಅಮೆರಿಕಕ್ಕೆ ಹೇಳಿತ್ತು. ಅದರಂತೆ ಅಮೆರಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದೆ.
ಒಪ್ಪಂದದ ಪ್ರಕಾರ ಸಂಪೂರ್ಣ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದ ದೇಶಗಳಲ್ಲಿ ಅಮೆರಿಕ ಕಡೆ ದೇಶವಾಗಿದೆ. ಕೆಲ ದೇಶಗಳು ಗೌಪ್ಯವಾಗಿ ಶಸ್ತ್ರಾಸ್ತ್ರ ದಾಸ್ತಾನು ಹೊಂದಿರುವ ಶಂಕೆಯೂ ಇದೆ ಎನ್ನಲಾಗಿದೆ.