ಬೆಂಗಳೂರು: ರಾಜ್ಯದಲ್ಲಿ ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಈ ಮೂಲಕ ಪೊಲೀಸರು ದೊಡ್ಡ ಭಯೋತ್ಪಾದಕ ಸಂಚನ್ನು ತಪ್ಪಿಸಿದ್ದು, ಸೈಯದ್ ಸುಹೇಲ್, ಉಮರ್, ಜುನೈದ್, ಮುದಾಸಿರ್ ಮತ್ತು ಜಾಹಿದ್ ಎಂಬುವವರನ್ನು ಬಂಧಿಸಿದ್ದಾರೆ.
ಈ ಆರೋಪಿಗಳು 2017ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದ ವೇಳೆ ಜಮಾತ್-ಎ-ಇಸ್ಲಾಮಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ತಾವೂ ಸಂಘಟನೆ ಸೇರುವುದರ ಬಗ್ಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದ್ದು, ತಾವು ಎಲ್ಲದಕ್ಕೂ ರೆಡಿ ಎಂದು ಉಗ್ರರಿಗೆ ಹೇಳಿದ್ದರು.
ಟಾರ್ಗೆಟ್ ಬೆಂಗಳೂರು:
ಬೆಂಗಳೂರು ಸಿಟಿಯನ್ನು ಟಾರ್ಗೆಟ್ ಮಾಡಿದ್ದ ಶಂಕಿತ ಉಗ್ರರು, ವಿದ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದರು. ಅಲ್ಲದೇ. ಬೆಂಗಳೂರಿನಲ್ಲಿ ಎಲ್ಲೆಲ್ಲಿ, ಏನು, ಹೇಗೆಲ್ಲಾ ಸ್ಫೋಟಿಸಬೇಕು ಎನ್ನುವುದರ ಬಗ್ಗೆ ಟ್ರೈನಿಂಗ್ ಪಡೆದಿದ್ದ ಶಂಕಿತರು, ಸುಮಾರು ಹತ್ತು ಕಡೆ ಬ್ಲಾಸ್ಟಿಂಗ್ಗೆ ಪ್ಲಾನ್ ಮಾಡಿದ್ದರು. ಎಲ್ಲಾ ಕಡೆಯೂ ಆಯಕ್ಟೀವ್ ಆಗಿದ್ದ ಶಂಕಿತರ ಟೀಂ, ಎಲ್ಲಾ ಪ್ಲಾನ್ ಮಾಡಿಕೊಂಡು ಅದನ್ನು ಕಾರ್ಯಗತಗೊಳಿಸಲು ಕಾಯುತ್ತಿದ್ದರು ಎಂದು ಹೇಳಲಾಗಿದೆ.