ಬದಿಯಡ್ಕ: ಉಬ್ರಂಗಳ ನಿವಾಸಿ ದಿ. ಕುಟ್ಯಾನ-ಚೀಂಪುಳು ದಂಪತಿ ಪುತ್ರ ರವಿಕಾಂತ ಕೇಸರಿ ಕಡಾರ್(45)ಹೃದಯಾಘಾತದಿಂದ ಸೋಮವಾರ ಸಂಜೆ ನಿಧನರಾದರು. ಸಾಮಾಜಿಕ ಕಾರ್ಯಕರ್ತರಾಗಿದ್ದ ಇವರು ಧಾರ್ಮಿಕ, ಸಾಂಸ್ಕøತಿಕ ರಂಗಗಳಲ್ಲೂ ಸಕ್ರಿಯರಾಗಿದ್ದರು.
ಪೆರಡಲ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ, ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನ ಸಮಿತಿ ಸದಸ್ಯ, ಜಿಲ್ಲಾ ಮೊಗೇರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಇವರು ತುಳುವೆರೆ ಆಯನ ಕೂಟ ಸೇರಿದಂತೆ ವಿವಿಧ ಸಾಮಾಜಿಕ, ಸಾಂಸ್ಕøತಿಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸಕ್ರಿಯರಾಗಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸಾಮಾಜಿಕವಾಗಿ ಸಕ್ರಯರಾಗಿದ್ದ ರವಿಕಾಂತರ ನಿಧನ ನಾಡಿನೆಲ್ಲೆಡೆ ದಿಗ್ಬ್ರಮೆ ಸೃಷ್ಟಿಸಿತು. ಮಿತಭಾಷಿಯೂ, ಕ್ರಿಯಾತ್ಮಕ ಚಟುವಟಿಕೆಗಳಿಂದ ನೂರಾರು ಸ್ನೇಹಿತರಿಗೆ ಅವರ ಅಗಲುವಿಕೆ ದುಃಖ ಸೃಷ್ಟಿಸಿದೆ.