ಮಂಜೇಶ್ವರ :ಹೇರೂರು ಬಜೆ ಶ್ರಿ ಮಹಾವಿಷ್ಣು ದೇವಸ್ಥಾನ ದೇಲಂತೊಟ್ಟು ಕ್ಷೇತ್ರದಲ್ಲಿ ಕರ್ಕಟ ಮಾಸದ ನಿಮಿತ್ತ ನಾಲ್ಕು ದಿನಗಳ ರಾಮಾಯಣ ಪಾರಾಯಣ ಪ್ರವಚನ ಜರಗಿದ್ದು ಸಮಾರೋಪ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರು ನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ ಯಕ್ಷಗಾನ ತಾಳಮದ್ದಳೆ ಶ್ರೀರಾಮ ನಿರ್ಯಾಣ ಆಖ್ಯಾಯಿಕೆಯ ಪ್ರದರ್ಶನ ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆಮದ್ದಳೆಯಲ್ಲಿ ಶ್ರೀಶ ನಾರಾಯಣ, ರಿತೇಶ್ ಅಡ್ಕ ಪಾಲ್ಗೊಂಡಿದ್ದರು. ಅರ್ಥಧಾರಿಗಳಾಗಿ ವೇದಮೂರ್ತಿ ಹರಿನಾರಾಯಣ ಮಯ್ಯ ಬಜೆ ಹಾಗೂ ಗುರುರಾಜ ಹೊಳ್ಳ ಬಾಯಾರು(ಶ್ರೀರಾಮ), ಯೋಗೀಶ ರಾವ್ ಚಿಗುರುಪಾದೆ(ಕಾಲಪುರುಷ), ರಾಜಾರಾಮ ರಾವ್ ಮೀಯಪದವು ಹಾಗೂ ಗುರುಪ್ರಸಾದ ಹೊಳ್ಳ ತಿಂಬರ(ಲಕ್ಷ್ಮಣ), ಅವಿನಾಶ ಹೊಳ್ಳ ವರ್ಕಾಡಿ (ದುರ್ವಾಸ), ವೇಣುಗೋಪಾಲ ಮಜಿಬೈಲು(ಊರ್ಮಿಳೆ), ವೇದಮೂರ್ತಿ ಗಣೇಶ ನಾವಡ ಮೀಯಪದವು(ಹನೂಮಂತನಾಗಿ) ಭಾಗವಹಿಸಿದ್ದರು.