ಇಂಫಾಲ್: ಮಣಿಪುರದಲ್ಲಿ ಇಂಟರ್‌ನೆಟ್ ಸೇವೆಗೆ ವಿಧಿಸಿದ್ದ ನಿರ್ಬಂಧವನ್ನು ಮಂಗಳವಾರ ಷರತ್ತುಬದ್ಧವಾಗಿ ಭಾಗಶಃ ತೆರವು ಮಾಡಲಾಗಿದೆ. ಆದರೆ, ಮೊಬೈಲ್ ಇಂಟರ್‌ನೆಟ್ ಮೇಲಿನ ನಿರ್ಬಂಧ ಮುಂದುವರಿದಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಇಂಫಾಲ್: ಮಣಿಪುರದಲ್ಲಿ ಇಂಟರ್‌ನೆಟ್ ಸೇವೆಗೆ ವಿಧಿಸಿದ್ದ ನಿರ್ಬಂಧವನ್ನು ಮಂಗಳವಾರ ಷರತ್ತುಬದ್ಧವಾಗಿ ಭಾಗಶಃ ತೆರವು ಮಾಡಲಾಗಿದೆ. ಆದರೆ, ಮೊಬೈಲ್ ಇಂಟರ್‌ನೆಟ್ ಮೇಲಿನ ನಿರ್ಬಂಧ ಮುಂದುವರಿದಿದೆ ಎಂದು ಗೃಹ ಇಲಾಖೆ ತಿಳಿಸಿದೆ.
'ಸ್ಥಿರ ಐಪಿ (ಇಂಟರ್‌ನೆಟ್ ಪ್ರೊಟೊಕಾಲ್)ಮೂಲಕ ಸಂಪರ್ಕ ಸಿಗಲಿದೆ.
ರೌಟರ್ ಅಥವಾ ಯಾವುದೇ ವ್ಯವಸ್ಥೆಯಿಂದ ವೈಫೈ ಹಾಟ್‌ಸ್ಪಾಟ್ ಒದಗಿಸಲು ಅವಕಾಶವಿಲ್ಲ ಎಂದು ಸರ್ಕಾರ ತಾಕೀತು ಮಾಡಿದೆ.
ಕಚೇರಿಗಳು, ವರ್ಕ್‌ಫ್ರಮ್ ಹೋಮ್, ಮೊಬೈಲ್ ರೀಚಾರ್ಚ್, ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್, ಬಿಲ್ ಪಾವತಿ ಸೇರಿದಂತೆ ಹಲವು ಆನ್‌ಲೈನ್ ಸೇವೆಗಳಿಗೆ ಎದುರಾಗಿದ್ದ ಸಮಸ್ಯೆ ಪರಿಗಣಿಸಿ ಸರ್ಕಾರ ಇಂಟರ್‌ನೆಟ್ ಸೇವೆಯನ್ನು ಪುನರ್‌ಸ್ಥಾಪಿಸಿದೆ.