ಪುಣೆ: ಇಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಇದೇ ವೇಳೆ ಮಹಾರಾಷ್ಟ್ರದ ಪಂಢರಪುರದ ವಾರ್ಷಿಕ ಯಾತ್ರೆಯಲ್ಲಿ ಸಿಂಗ್ ವಹಿಸಿದ್ದಕ್ಕೆ ಅವರನ್ನು ಹೊಗಳಿದರು.

ದಿವಂಗತ ಕಾಂಗ್ರೆಸ್ ನಾಯಕ ರಾಮಕೃಷ್ಣ ಮೋರೆ ಅವರ ಕುರಿತಾದ ಪುಸ್ತಕವನ್ನು ಉಭಯ ನಾಯಕರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಸಿಂಗ್ ಅವರು ಪ್ರತಿ ವರ್ಷ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ಬರುತ್ತಾರೆ. ಅವರಿಗಿಂತ ವಯಸ್ಸಿನಲ್ಲಿ ಚಿಕ್ಕವನಾದರೂ ನನಗೆ ಅಷ್ಟು ನಡೆಯಲು ಧೈರ್ಯವಿಲ್ಲ. ಯಾತ್ರೆ ವೇಳೆ ನೀವು ಬಹಳ ದೂರ ನಡೆದಿರಿ, ಅದಕ್ಕೆ ಅಭಿನಂದಿಸುತ್ತೇನೆ' ಎಂದು ಶ್ಲಾಘಿಸಿದರು.