HEALTH TIPS

ಗುರು ಒಲಿದರೆ ಜೀವನದಲ್ಲಿ ಸಕಲವೂ ಸಿದ್ದಿಸಬಹುದು: ಪದ್ಮರಾಜ ಪಟ್ಟಾಜೆ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ

                ಬದಿಯಡ್ಕ: ಗುರು ಒಲಿದರೆ ಜೀವನದಲ್ಲಿ ಸಕಲವೂ ಸಿದ್ದಿಸಬಹುದು. ಅಂತಹ ಮಹತ್ತರವಾದ ಚೇತನವನ್ನು ಆರಾಧಿಸುವ ದಿನವೇ ಗುರುಪೂರ್ಣಿಮಾ ಎಂದು ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ ಹೇಳಿದರು.

            ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸೋಮವಾರ ಗುರುಪೂರ್ಣಿಮೆಯಂದು ಜರಗಿದ ಗುರುನಮನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿದರು.

         ಪ್ರತಿಯೊಬ್ಬನಿಗೂ ತಾಯಿಯೇ ಮೊದಲಗುರು. ನಂತರದಲ್ಲಿ ತಂದೆಯು ಗುರುಸ್ಥಾನದಲ್ಲಿದ್ದು ನಮ್ಮ ಜೀವನಕ್ಕೆ ಬೇಕಾಗಿರುವ ಮೌಲ್ಯಗಳನ್ನು ನಮ್ಮೊಳಗಿಳಿಸಿ ಬದುಕನ್ನು ಹಸನುಗೊಳಿಸುವುದಕ್ಕೆ ಕಾರಣೀಭೂತರಾಗುತ್ತಾರೆ. ಸುದೀರ್ಘ ಜೀವನವನ್ನು ಸಬಲಗೊಳಿಸಲು ಬೇಕಾಗಿರುವ ಎಲ್ಲ ಜ್ಞಾನವನ್ನು ನೀಡುವ ವ್ಯಕ್ತಿತ್ವವೇ ಗುರು ಆಗಿರುತ್ತಾರೆ. ವಿದ್ಯಾರ್ಥಿಗಳಿಗೆ ತನ್ನೆಲ್ಲಾ ಜ್ಞಾನಧಾರೆಯನ್ನು ಕಲ್ಮಶರಹಿತವಾಗಿ ನೀಡುವ ನಿಮ್ಮ ಎಲ್ಲಾ ಅಧ್ಯಾಪಕರೂ ಗುರುಸಮಾನರಾಗಿರುತ್ತಾರೆ. ಆ ದಿನ ವ್ಯಾಸಜಯಂತಿ ಎಂಬುದಾಗಿಯೂ ಕರೆಯುತ್ತಾರೆ. ಸಕಲವೇದಶಾಸ್ತ್ರಗಳನ್ನು ಸಕಾಲಕ್ಕೆ ಅನುಗುಣವಾಗಿ ಅಥ್ರ್ಯಸಿಕೊಳ್ಳುವಂತೆ ವಿಭಾಗೀಕರಣಗೊಳಿಸಿದ ಮಹರ್ಷಿ ವೇದವ್ಯಾಸರು ಸರ್ವಮಾನ್ಯರಾಗಿದ್ದಾರೆ ಎಂದರು. 

              ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅವಿಚ್ಛಿನ್ನ ಪರಂಪರಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ   ಅನುಗ್ರಹ ಮಾರ್ಗದರ್ಶನದೊಂದಿಗೆ ನಮ್ಮೀ ಶಾಲೆಯು ಉತ್ತಮವಾಗಿ ಬೆಳೆಯುವಂತಾಗಲಿ ಎಂಬುದಾಗಿ ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪುಷ್ಪನಮನ ಸಲ್ಲಿಸಿದರು. ವಿದ್ಯಾರ್ಥಿ ನಾಯಕಿ ಪೂಜಾಶ್ರೀ ಸ್ವಾಗತಿಸಿ, ಆರಾಧ್ಯ ರೈ ವಂದಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಗುರುನಮನ ಸ್ತೋತ್ರವನ್ನು ಪಠಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries