ಕಾಸರಗೋಡು: ಬೆಂಗಳೂರಿನ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ಮಹಾವಿದ್ಯಾಲಯ 2023ನೇ ಸಾಲಿನಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಡಿ ಆಯುರ್ವೇದ ಪಂಚಕರ್ಮ ವಿಭಾಗದಲ್ಲಿ ಮೈಸೂರಿನ ಸರ್ಕಾರಿ ಆಯುರ್ವೇದ ವ್ಯದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ. ರಮ್ಯಶ್ರೀ ಡಿ. ಪ್ರಥಮ ರ್ಯಾಂಕಿನೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ. ಇವರು ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ಹಾಗೂ ಸ್ವರ್ಗ ಶ್ರೀ ವಿವೇಕಾನಂದ ಎಯುಪಿ ಶಾಲಾ ಹಳೇ ವಿದ್ಯಾರ್ಥಿನಿ.ಹಾಗೂ ಪೆರ್ಲ ಸನಿಹದ ದರ್ಭೆ ರಾಮ ಭಟ್-ಭಾಗ್ಯಲಕ್ಷ್ಮೀ ದಂಪತಿ ಪುತ್ರಿ.