ಕಾಸರಗೋಡು : ಜಿಲ್ಲೆಯಲ್ಲಿ ಮಳೆ ತೀವ್ರತೆ ಕಡಿಮೆಯಾಗಿದ್ದು, ಭಾನುವಾರ ಹೊಳೆಗಳಲ್ಲಿ ನೀರಿನ ಮಟ್ಟದಲ್ಲಿ ಇಳಿಕೆಯುಂಟಾಗಿದೆ. ಶನಿವಾರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿದ್ದು, ಬಿರುಸಿನ ಮಳೆಯಾಗಿತ್ತು. ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಳರಿಕುಂಡು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.
ಬಿರುಸಿನ ಮಳೆಯಿಂದ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಪ್ರಾಕೃತಿಕ ವಿಕೋಪದಿಂದ 86ಮನೆಗಳು ಆಂಶಿಕ ಹಾಗೂ ಐದು ಮನೆಗಳು ಫೂರ್ಣಪ್ರಮಾಣದಲ್ಲಿ ಹಾನಿಗೀಡಾಗಿದೆ.
ಜುಲೈ 1 ರಿಂದ ಕೇರಳ ರಾಜ್ಯ ವಿದ್ಯುತ್ ಮಂಡಳಿಗೆ ಮಳೆಯಿಂದ 61 ಎಚ್‍ಟಿ ಜಿಎಪಿಎ ಪೆÇೀಸ್ಟ್‍ಗಳು ಮತ್ತು 469 ಎಲ್‍ಟಿ ಪೆÇೀಸ್ಟ್‍ಗಳು ಹಾನಿಗೀಡಾಗಿದೆ.