ಪೆರ್ಲ: ಓದುವ ಹವ್ಯಾಸ ಎಲ್ಲರಿಗೂ ಜ್ಞಾನ ಬೆಳೆಸುವಂತದ್ದು.ಮನೆಯಲ್ಲಿ ಹಿರಿಯರು ಓದುವ ಮೂಲಕ ಕಿರಿಯರಿಗೆ ಮಾದರಿ ಆಗಬೇಕು ಎಂದು ನಲ್ಕ ವಾಗ್ದೇವಿ ಕಿರಿಯ ಪ್ರಾಥಮಿಕ ಶಾಲೆಯ ಮಾತೃ ರಕ್ಷಕ ಮಂಡಳಿಯ ಅಧ್ಯಕ್ಷೆ ಸುಮಲತ ಕುದುಕ್ಕುಳಿ ನುಡಿದರು.
ಓದುವ ಮಾಸಾಚರಣೆ ನಲ್ಕ ವಾಗ್ದೇವಿ ಶಾಲೆಯಲ್ಲಿ ಜರುಗಿದ ಮಾತೃ ರಕ್ಷಕರಿಗಾಗಿ ಪುಸ್ತಕ ಓದುವ ವಿಶೇಷ ‘ಅಮ್ಮ ಓದು’ ಕಾರ್ಯಕ್ರಮದಲ್ಲಿ ಅವರು ತಾವು ಓದಿದ ಪುಸ್ತಕದ ಆಶಯ ವಿವರಿಸಿ ಮಾತನಾಡಿದರು.
ಶಾಲಾ ಗ್ರಂಥಾಲಯದ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ಮುಖ್ಯ ಶಿಕ್ಷಕ ಶ್ರೀಪತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿಯರಾದ ನಳಿನಿ, ಮಶ್ ಹುದಾ ಪುಸ್ತಕ ವಿಮರ್ಶೆ ಮಾಡಿದರು. ಹಿರಿಯ ಶಿಕ್ಷಕಿ ಉಷಾದೇವಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ವಿವಿಧ ಕಾರ್ಯಕ್ರಮ ಜರುಗಿತು. ನಾಲ್ಕನೆಯ ತರಗತಿಯ ಅರ್ಪಿತ್ ಕಾರ್ಯಕ್ರಮ ನಿರೂಪಿಸಿದರು. ರೂಪಿಕಾ ವಂದಿಸಿದರು. ಶಿಕ್ಷಕಿ ಮಮತಾ ಸಹಕರಿಸಿದರು.