ಆಲಪ್ಪುಳ: ವಿಷಕಾರಿ ಹಣ್ಣನ್ನು ತಿಂದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹುಡುಗಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ದುರಂತ ಸಾವಿಗೀಡಾಗಿರುವ ಘಟನೆ ಕೇರಳ ಆಲಪ್ಪುಳದಲ್ಲಿ ನಡೆದಿದೆ.
ಆಲಪ್ಪುಳ: ವಿಷಕಾರಿ ಹಣ್ಣನ್ನು ತಿಂದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹುಡುಗಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ದುರಂತ ಸಾವಿಗೀಡಾಗಿರುವ ಘಟನೆ ಕೇರಳ ಆಲಪ್ಪುಳದಲ್ಲಿ ನಡೆದಿದೆ.
ವೀಣಾ (14) ಮೃತ ಬಾಲಕಿ. ಈಕೆ ಆಲಪ್ಪುಳದ ಕನ್ನಂಚೇರಿಯ ಕರುವಟ್ಟ ಮೂಲದವಳು.
ಹಣ್ಣು ತಿಂದಿದ್ದರ ಬಗ್ಗೆ ಹೇಳಿದ್ದರೆ ಸೂಕ್ತ ಚಿಕಿತ್ಸೆಯನ್ನು ನೀಡಿ ಹುಡುಗಿ ಉಳಿಸಬಹುದಾಗಿತ್ತು. ಆದರೆ, ವೀಣಾ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಆಕೆ ಸಾಮಾನ್ಯ ಚಿಕಿತ್ಸೆ ನೀಡಿ ವಾಪಸ್ ಕಳುಹಿಸಲಾಯಿತು.
ಇದಾದ ಮಾರನೇ ದಿನ ವೀಣಾಳ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಮತ್ತೆ ಆಕೆಯನ್ನು ವಂದಾನಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ವೀಣಾ ತಾನು ವಿಷಯುಕ್ತ ಹಣ್ಣನ್ನು ಸೇವಿಸಿದ್ದಾಗಿ ಬಹಿರಂಗಪಡಿಸಿದ್ದಾಳೆ. ಆದರೆ, ಅಷ್ಟರಲ್ಲಾಗಲೇ ತಡವಾಗಿತ್ತು. ಚಿಕಿತ್ಸೆ ನೀಡಿದರೂ ವೀಣಾ ಬದುಕುಳಿಯಲಿಲ್ಲ.
ವೈದ್ಯರ ಬಳಿ ಏನನ್ನು ಮುಚ್ಚಿಡಬಾರದು ಎಂದು ಹೇಳುವುದು ಇದೇ ಕಾರಣಕ್ಕೆ. ವೀಣಾ ಮೊದಲೇ ತಾನು ವಿಷಯುಕ್ತ ಹಣ್ಣನ್ನು ಸೇವಿಸಿದ್ದೇನೆ ಎಂದು ಹೇಳಿದ್ದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತು ಆಕೆಯ ಪ್ರಾಣ ಉಳಿಯುತ್ತಿತ್ತು. ಆದರೆ, ಆಕೆ ಮಾಡಿದ ಒಂದು ಸಣ್ಣ ಪ್ರಮಾದ ಇದೀಗ ಆಕೆಯ ಪ್ರಾಣವನ್ನು ಕಸಿದುಕೊಂಡಿದೆ. ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.