ಕಾಸರಗೋಡು: ಪಶು ಸಂಗೋಪನಾ ಇಲಾಖೆ ಕಾಸರಗೋಡು ವತಿಯಿಂದ ನಡೆಸುವ ಜಿಲ್ಲೆಯ ವಿವಿಧ ಬ್ಲಾಕ್‍ಗಳಲ್ಲಿ ರಾತ್ರಿವೇಳೆ ಪಶುವೈದ್ಯಕೀಯ ಕೆಲಸಕ್ಕಾಗಿ ವೆಟರಿನರಿ ಸರ್ಜನ್ ಹುದ್ದೆಗೆ ತಾತ್ಕಾಲಿಕ ನೇಮಕಾತಿ ನಡೆಸಲಾಗುತ್ತಿದೆ.
ಮಂಜೇಶ್ವರ, ಕಾರಡ್ಕ ಮತ್ತು ಪರಪ್ಪ ಬ್ಲಾಕ್‍ಗಳಲ್ಲಿ ನೇಮಕಾತಿ ನಡೆಯಲಿದೆ. ವೆಟರಿನರಿ ಸೈನ್ಸ್ ನಲ್ಲಿ ಪದವಿ ಮತ್ತು ಕೇರಳ ವೆಟರಿನರಿ ಕೌನ್ಸಿಲ್ ನಲ್ಲಿ ರಿಜಿಸ್ಟ್ರೇಷನ್ ಆಗಿರಬೇಕು. ಜುಲೈ 27 ರಂದು ಬೆಳಿಗ್ಗೆ 10.30ಕ್ಕೆ ಕಾಸರಗೋಡು ಸಿವಿಲ್ ಸ್ಟೇಷನ್‍ನ ಜಿಲ್ಲಾ ಪಶು ಸಂಗೋಪನಾ ಇಲಾಖೆ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ವೆಬ್ಸೈಟ್ https://kvsc.kerala.gov.in ದೂರವಾಣಿ ಸಂಖ್ಯೆ:04994 255483.