ನೋಯ್ಡಾ: ಆನ್‌ಲೈನ್ ಗೇಮ್ ಪಬ್‌ಜಿ ಮೂಲಕ ಪರಿಚಿತನಾದ ವ್ಯಕ್ತಿಯನ್ನು ಭೇಟಿ ಮಾಡಲು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನ ಮಹಿಳೆಯನ್ನು ಪೊಲೀಸರು ನೋಯ್ಡಾದಲ್ಲಿ ಮಂಗಳವಾರ ಬಂಧಿಸಿದ್ದಾರೆ.
ನೋಯ್ಡಾ: ಆನ್‌ಲೈನ್ ಗೇಮ್ ಪಬ್‌ಜಿ ಮೂಲಕ ಪರಿಚಿತನಾದ ವ್ಯಕ್ತಿಯನ್ನು ಭೇಟಿ ಮಾಡಲು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನ ಮಹಿಳೆಯನ್ನು ಪೊಲೀಸರು ನೋಯ್ಡಾದಲ್ಲಿ ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಪಾಕಿಸ್ತಾನದ ಜಾಕೋಬಾಬಾದ್ ನಿವಾಸಿ, ಸೀಮಾ ಗುಲಾಮ್ ಹೈದರ್ ಎಂದು ಗುರುತಿಸಲಾಗಿದ್ದು, ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನೋಯ್ಡಾದ ಸಚಿನ್ ಎಂಬಾತ ಸೀಮಾಗೆ 2019ರಲ್ಲಿ ಪಬ್‌ಜಿ ಮೂಲಕ ಪರಿಚಯವಾಗಿದ್ದ. ನಂತರ ಇಬ್ಬರ ಮಧ್ಯೆ ಪ್ರೀತಿ ಬೆಳೆದಿತ್ತು. ಇವರಿಬ್ಬರೂ 50 ದಿನಗಳಿಂದ ನೋಯ್ಡಾದಲ್ಲಿ ವಾಸವಾಗಿದ್ದರು. ಆದರೆ ಸೀಮಾ ಈಗಾಗಲೇ ಮದುವೆಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಸೀಮಾ ಅವರ ನಾಲ್ಕು ಮಕ್ಕಳನ್ನು ವಿಚಾರಣೆ ಸಂಬಂಧ ಬಂಧಿಸಲಾಗಿದೆ.
ಗುಪ್ತಚರ ದಳ ಮತ್ತು ಭಯೋತ್ಪಾದನಾ ನಿಗ್ರಹ ದಳ ಸೀಮಾ ಅವರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿವೆ.
ಪಾಕಿಸ್ತಾನದ ಮಹಿಳೆಗೆ ಆಶ್ರಯ ನೀಡಿದ ಆರೋಪದ ಮೇಲೆ ಸಚಿನ್ ಹಾಗೂ ಅವರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.