ಕಠ್ಮಂಡು (PTI): ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ನಗದು ಬಹುಮಾನವನ್ನು ಪಶ್ಚಿಮ ನೇಪಾಳದ ಗ್ರಾಮ ಪಂಚಾಯತಿಯೊಂದು ಘೋಷಿಸಿದೆ. ಜನಸಂಖ್ಯೆ ಹೆಚ್ಚಳಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ.
ಕಠ್ಮಂಡು (PTI): ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ನಗದು ಬಹುಮಾನವನ್ನು ಪಶ್ಚಿಮ ನೇಪಾಳದ ಗ್ರಾಮ ಪಂಚಾಯತಿಯೊಂದು ಘೋಷಿಸಿದೆ. ಜನಸಂಖ್ಯೆ ಹೆಚ್ಚಳಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ.
ಪಲ್ಪಾ ಜಿಲ್ಲೆಯ ರಿಬ್ದಿಕೋಟ್ ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.
'ಜನಸಂಖ್ಯೆ ಹೆಚ್ಚಾದಷ್ಟು ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಾಗುತ್ತವೆ' ಎಂದು ವಾರ್ಡ್‌ನ ಅಧ್ಯಕ್ಷ ಚಿರಂಜೀವಿ ಪೊಖಾರೆಲ್ ಹೇಳಿದ್ದಾರೆ.
ಜನಸಂಖ್ಯೆ ಕಡಿಮೆ ಇರುವ ಕಾರಣದಿಂದ ಈ ಪ್ರದೇಶದ ಫಲವತ್ತಾದ ಭೂಮಿ ನಿಷ್ಪ್ರಯೋಜಕವಾಗಿದೆ. 2011ರ ಜನಗಣತಿ ವೇಳೆ ಈ ವಾರ್ಡ್‌ನಲ್ಲಿ 2,034 ಜನರಿದ್ದರು, 2021ರ ಜನಗಣತಿ ವೇಳೆ 300 ಜನರು ಕಡಿಮೆಯಾಗಿದ್ದರು. ಯುವಕರು ಉದ್ಯೋಗ ಅರಸಿ ವಿದೇಶಗಳಿಗೆ ತೆರಳುತ್ತಿರುವುದೇ ಜನಸಂಖ್ಯೆ ಕಡಿಮೆಯಾಗಲು ಕಾರಣ ಎಂದು ಅವರು ಹೇಳಿದ್ದಾರೆ.