ಅಲಹಾಬಾದ್: ಅನುಮಾನಾಸ್ಪದ ರೀತಿಯಲ್ಲಿ ವಿದ್ಯಾರ್ಥಿ ಸಾವಿನ ವಿಚಾರವಾಗಿ ವಿಶ್ವವಿದ್ಯಾಲಯದ ಶಿಕ್ಷಕರೊಂದಿಗೆ ಬುಧವಾರ ಗಲಾಟೆ ನಡೆಸಿದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿರುವ ಕೆಲವು ಕಚೇರಿಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ವಿದ್ಯಾರ್ಥಿ ನಾಯಕ ಅಜಯ್ ಯಾದವ್ ಸಾಮ್ರಾಟ್ ನೇತೃತ್ವದಲ್ಲಿ ಹೊರಗಿನಿಂದ ಬಂದ ಕೆಲವು ದುಷ್ಕರ್ಮಿಗಳು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಧ್ವಂಸಗೊಳಿಸಿದ್ದಾರೆ. ಅಸಭ್ಯವಾಗಿ ವರ್ತಿಸಿದ್ದು, ಮಹಿಳೆಯರೊಂದಿಗೆ ಜಗಳವಾಡಿದ್ದಾರೆ. ಇದರಲ್ಲಿ ಕೆಲವು ಮಹಿಳಾ ಶಿಕ್ಷಕರು ಗಾಯಗೊಂಡಿದ್ದಾರೆ ಎಂದು ವಿಶ್ವವಿದ್ಯಾಲಯದ ವಕ್ತಾರರು ಹೇಳಿದ್ದಾರೆ.ದುಷ್ಕರ್ಮಿಗಳು ಹಿಂದಿ ಮತ್ತು ಸಂಸ್ಕೃತ ಇಲಾಖೆಗಳನ್ನು ಧ್ವಂಸಗೊಳಿಸಿದ್ದು, ಮೌಲ್ಯಮಾಪನ ಕಚೇರಿಯಲ್ಲಿ ಕೆಲವು ದಾಖಲೆಗಳನ್ನು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.
ಮಂಗಳವಾರ ವಿದ್ಯಾರ್ಥಿ ಸಂಘದ ಕಟ್ಟಡದ ಮುಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದಿದ್ದ ವಿಶ್ವವಿದ್ಯಾನಿಲಯದಲ್ಲಿ ಮಾಧ್ಯಮ ಅಧ್ಯಯನದ ಐದನೇ ಸೆಮಿಸ್ಟರ್ ವಿದ್ಯಾರ್ಥಿ ಅಶುತೋಷ್ ಕುಮಾರ್ ದುಬೆಯನ್ನು ಇತರ ವಿದ್ಯಾರ್ಥಿಗಳು ಎಸ್‌ಆರ್‌ಎನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಶಿವಕುಟಿ) ರಾಜೇಶ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯ ಸಾವು ದುರದೃಷ್ಟಕರ ಎಂದು ಹೇಳಿದೆ ಮತ್ತು ಅದಕ್ಕೂ ವಿಶ್ವವಿದ್ಯಾಲಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿಶ್ವವಿದ್ಯಾನಿಲಯ ಆಡಳಿತ ಹೇಳಿದೆ. ದುಬೆ ಕುಟುಂಬದ ಸಾಕಷ್ಟು ಒತ್ತಡಕ್ಕೆ ಸಿಲುಕಿದ್ದರು. ಇದು ಅವರ ಆಹಾರಕ್ರಮದ ಮೇಲೂ ಪರಿಣಾಮ ಬೀರಿತ್ತು ಎಂದು ವಕ್ತಾರರು ಹೇಳಿದ್ದಾರೆ.