ಕಾಸರಗೋಡು : ಧಾರ್ಮಿಕ ಸಾಮರಸ್ಯ ಜಿಲ್ಲಾ ಮಟ್ಟದ ಸಮಿತಿ ಸಭೆ ಕಸರಗೋಡು ಜಿಲ್ಲಾಧಿಕರಿ ಸಭಾಂಗಣದಲ್ಲಿ ಜರುಗಿತು. ಸಭೆಯಲ್ಲಿ ಜಿಲ್ಲೆಯಲ್ಲಿ ಧಾರ್ಮಿಕ ಸೌಹಾರ್ದತೆ ಕಾಪಾಡುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಕ್ರಮಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇಲೀಸ್ ಮುಖ್ಯಸ್ಥ ಡಾ. ವೈಭವ್ ಸಕ್ಸೇನಾ, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಎ.ಕೆ.ರಮೇಂದ್ರನ್, ಆರ್‍ಡಿಓ ಅತುಲ್ ಎಸ್.ನಾಥ್, ಡಿವೈಎಸ್ಪಿಗಳಾದ ಪಿ.ಕೆ.ಸುಧಾಕರನ್, ಪಿ.ಬಾಲಕೃಷ್ಣನ್ ನಾಯರ್, ಸಿ.ಕೆ.ಸುನಿಲ್ ಕುಮಾರ್, ಡಾ.ವಿ.ಬಾಲಕೃಷ್ಣನ್, ಅಬಕಾರಿ ಉಪ ಆಯುಕ್ತ ಡಿ.ಬಾಲಚಂದ್ರನ್ ಮತ್ತಿತರರು ಭಾಗವಹಿಸಿದ್ದರು.