ದೆಹಲಿ: ವಾಟ್ಸ್ಆಯಪ್, ಟೆಲಿಗ್ರಾಮ್ ಹಾಗೂ ಒಟಿಟಿ ಆಯಪ್ಗಳಿಗೆ ಕಡಿವಾಣ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಂದಾಗಿದೆ.
ಈ ಕುರಿತು TRAI ಬಹು ನಿರೀಕ್ಷಿತ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸಿದೆ.
ಒಟಿಟಿಗಳಿಗೆ ನಿಯಂತ್ರಣ ಅಗತ್ಯವಿದೆಯೇ ಮತ್ತು ಅದು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಎಂಬುದರ ಕುರಿತು ಟ್ರಾಯ್ ಅಭಿಪ್ರಾಯಗಳನ್ನು ಪಡೆಯಲು ಮುಂದಾಗಿದೆ.
ಈ ಸಮಾಲೋಚನ ಪತ್ರಿಕೆಯು ಎರಡು ಅಂಶಗಳನ್ನು ಒಳಗೊಂಡಿದ್ದು, ಓಟಿಟಿ ಆಧಾರಿತ ಸಂವಹನ ಅಪ್ಲಿಕೇಶನ್‌ಗಳ ನಿಯಂತ್ರಕ ಕಾರ್ಯವಿಧಾನ ಗುರುತಿಸುವುದು ಮತ್ತು ಅಂತಹ ಅಪ್ಲಿಕೇಶನ್‌ಗಳ ಆಯ್ದ ನಿಷೇಧಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದಾಗಿದೆ.
ಭದ್ರತೆಯನ್ನು ನೀಡುವ ಸಾಮಾನ್ಯ ಕರೆ, ಸಂದೇಶಗಳು ಮತ್ತು ಇಂಟರ್ನೆಟ್ ಆಧಾರಿತ ಕರೆಗಳು, ಮೆಸೇಜಿಂಗ್ ಅಪ್ಲಿಕೇಶನ್ ಪರವಾನಗಿದಾರರಿಗೆ ಹಣಕಾಸಿನ ಬಾಧ್ಯತೆಗಳಿಲ್ಲದೆ ಒಂದೇ ರೀತಿಯ ಸೇವೆಗಳನ್ನು ಒದಗಿಸುವುದರಿಂದ ಅವುಗಳನ್ನು ಮೇಲ್ವಿಚಾರಣೆ ಮಾಡಬೇಕು ಎಂದು ಟೆಲ್ಕೋಸ್ ಒತ್ತಾಯಿಸಿದೆ.
ಟೆಲ್ಕೊಸ್ ಎನ್ನುವುದು ದೂರಸಂಪರ್ಕದ ಆಪರೇಟರ್ ಆಗಿದ್ದು, ಇದು ಅಂತಿಮ-ಗ್ರಾಹಕರಿಗೆ ಸ್ಥಿರ-ಲೈನ್, ಮೊಬೈಲ್ ಮತ್ತು ಡೇಟಾ ಸೇವೆಗಳಂತಹ ದೂರಸಂಪರ್ಕ ಸೇವೆಗಳನ್ನು ಒದಗಿಸುವ ಕಂಪನಿಯಾಗಿದೆ. ಟೆಲಿಕಾಂ ನಿಯಂತ್ರಕವು, ಅಶಾಂತಿಯ ಸಂದರ್ಭಗಳಲ್ಲಿ ಓಟಿಟಿ ಸೇವೆಗಳ ಮೇಲೆ ಆಯ್ದ ನಿಷೇಧಗಳ ಕುರಿತು ಚರ್ಚಿಸಲು ಮುಂದಾಗಿದೆ.