ಮಂಜೇಶ್ವರ: ಕೇರಳ ಸರ್ಕಾರದ ಸ್ಥಳೀಯಾಡಳಿತ(ಆರ್‍ಸಿ) ಇಲಾಖೆ (ಮುದ್ರಣ) ಸಂಖ್ಯೆ 25/2023 ಎಲ್‍ಎಸ್‍ಜಿಡಿ ಮೇ 23 ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಏಪ್ರಿಲ್ 18 ರಂದು ಮಂಜೇಶ್ವರ ಗ್ರಾಮ ಪಂಚಾಯಿತಿಯ ಸಭೆಯು ಮೂಲ ತೆರಿಗೆ ದರಗಳ ಕರಡು ಪರಿಷ್ಕರಣೆಗೆ ಅನುಮೋದನೆ ನೀಡಿ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಇಲ್ಲಿಯವರೆಗೆ ಯಾವುದೇ ಆಕ್ಷೇಪಣೆಗಳು ಬಾರದಿರುವುದರಿಂದ ಮಂಜೇಶ್ವರ ಗ್ರಾಮ ಪಂಚಾಯತಿಯ ಪ್ರತಿ ಚದರ ಮೀಟರ್ ಮಹಡಿ ಪ್ರದೇಶ/ಸಂಖ್ಯೆಗೆ ಅನ್ವಯವಾಗುವ ಮೂಲ ಆಸ್ತಿ ತೆರಿಗೆ ದರಗಳನ್ನು ಅಂತಿಮವಾಗಿ ನಿಗದಿಪಡಿಸಲಾಗಿದೆ ಮತ್ತು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 04998 272238 ಸಂಪರ್ಕಿಸಲು ಸಂಬಂಧಪಟ್ಟ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.