ಕುಂಬಳೆ: ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಬಳಿಕ ಇದೇ ಪ್ರಥಮ ಬಾರಿಗೆ ಪುತ್ತಿಗೆ ಮುಹಿಮ್ಮತ್‍ಗೆ ಭೇಟಿ ನೀಡಿದ ಯು.ಟಿ ಖಾದರ್ ಅವರಿಗೆ ಸಂಸ್ಥೆ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು.
ಮುಹಿಮತ್ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಅಬ್ದುಲ್ಲಾ ಕುಞÂಫೈಝಿ ಮುಹಿಮ್ಮತ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮುಖ್ಯ ಅತಿಥಿಗಳಾಗಿದ್ದರು. ಉಪಾಧ್ಯಕ್ಷ ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಉಮರ್ ಸಖಾಫಿ ಕರ್ನೂರು, ಮೂಸಾ ಸಖಾಫಿ ಕಳತ್ತೂರು, ಇ.ಕೆ.ಮುಹಮ್ಮದ್ ಕುಞÂ, ಅಬ್ದುಲ್ ಫತ್ತಾಹ್ ಸಅದಿ, ಅಬ್ಬಾಸ್ ಸಖಾಫಿ ಕಾವುಪುರಂ ಮೊದಲಾದವರು ಉಪಸ್ಥಿತರಿದ್ದರು.