ಕಣ್ಣೂರು: ಕಾಸರಗೋಡು- ತಿರುವನಂತಪುರಂ ಮಾರ್ಗದ ವಂದೇಭಾರತ್ ಎಕ್ಸ್‍ಪ್ರೆಸ್ ತಾಂತ್ರಿಕ ದೋಷದಿಂದ ಬಾಕಿಯಾದ ಘಟನೆ ನಡೆದಿದೆ.
ರೈಲು ಕಣ್ಣೂರು ನಿಲ್ದಾಣದಲ್ಲಿ ನಿಲುಗಡೆಯಾಯಿತು. ನಿನ್ನೆ ಮಧ್ಯಾಹ್ನ 3:30ಕ್ಕೆ ಹೊರಡಬೇಕಿದ್ದ ರೈಲು ಯಾಂತ್ರಿಕ ವೈಫಲ್ಯದಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ನಿಲ್ದಾಣದಲ್ಲಿ ನಿಂತಿತ್ತು. ಐದು ಗಂಟೆಗೆ ಪ್ರಯಾಣ ಪುನರಾರಂಭವಾಯಿತು, ಆದರೆ ಸ್ವಲ್ಪ ಪ್ರಯಾಣದ ನಂತರ ರೈಲು ಮತ್ತೆ ನಿಂತಿತು.
ಕಂಪ್ರೆಸರ್ ವೈಫಲ್ಯದಿಂದಾಗಿ ಸಮಸ್ಯೆ ಉಂಟಾಗಿದೆ ಎಂದು ವರದಿಯಾಗಿದೆ. ರೈಲು ಹೊರಡುವ ಸಮಯ ಬಂದಾಗಲೂ ಮೊದಲು ವಿದ್ಯುತ್ ಬಾಗಿಲುಗಳನ್ನು ಮುಚ್ಚಲಾಗಲಿಲ್ಲ. ಬಳಿಕ ರೈಲಿನ ಇಂಜಿನ್ ಆಫ್ ಮಾಡಲಾಗಿದೆ.ರೈಲಿನೊಳಗಿನ ಎಸಿ ಕೂಡ ಆಫ್ ಮಾಡಲಾಗಿದೆ.
ಈ ವೇಳೆ ರೈಲಿನ ಮುಚ್ಚಿದ ಬಾಗಿಲು ತೆರೆಯದ ಕಾರಣ ಪ್ರಯಾಣಿಕರು ತೀವ್ರ ಬಿಸಿಲಿನ ಝಳಕ್ಕೆ ತುತ್ತಾದರು. ಅರ್ಧ ಗಂಟೆಯ ನಂತರ ಬಾಗಿಲು ತೆರೆಯಿತು.