ಬದಿಯಡ್ಕ: ಕುರುಮುಜ್ಜಿಕಟ್ಟೆ ಶ್ರೀಧರ್ಮ ಶಾಸ್ತಾ ಭಜನ ಮಂದಿರದಲ್ಲಿ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ರಂಗ ಶರ್ಮಾ ಉಪ್ಪಂಗಳ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಭಜನೆಯಿಂದ ಮನಸ್ಸಿಗೆ ಶಾಂತಿ, ಸಮಾಧಾನ ಲಭಿಸುತ್ತದೆ. ಜೊತೆಗೆ ಭಜನೆ ವಿಭಜನೆಯನ್ನು ದೂರ ಮಾಡುತ್ತದೆ ಎಂದರು.
ಮಂದಿರದ ತಂತ್ರಿ ಗಣೇಶ ಮರ್ದಂಗೆರೆ, ಅರ್ಚಕ ರವಿ ದಂಡೆಪ್ಪಾಡಿ ಅಧ್ಯಕ್ಷ ರಾಧಾಕೃಷ್ಣ ನಾಯರ್, ಪವಿತ್ರನ್, ಪ್ರಸಾದ್ ಕುರುಮುಜ್ಜಿ, ಹಾಗೂ ಅಪಾರ ಭಕ್ತ ಸಮೂಹ ಉಪಸ್ಥಿತರಿದ್ದರು. ರಮೇಶ್ ಕುರುಮುಜ್ಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ವಂದಿಸಿದರು.