ತಿರುವನಂತಪುರಂ: ಮುಖ್ಯಮಂತ್ರಿ ಕಚೇರಿಯನ್ನು ಕೇಂದ್ರವಾಗಿಟ್ಟುಕೊಂಡು ರಹಸ್ಯ ಗೂಂಡಾ ತಂಡ ಕೆಲಸ ಮಾಡುತ್ತಿದೆ ಎಂದು ಐಜಿ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ಮುಖ್ಯಮಂತ್ರಿಗಳ ಕಚೇರಿ ಅಸಾಧಾರಣ ಸಾಂವಿಧಾನಿಕ ಶಕ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವÀರು.
ಮುಖ್ಯಮಂತ್ರಿ ಕಚೇರಿಯಲ್ಲೇ ಹಣಕಾಸು ವಹಿವಾಟು ಮತ್ತಿತರ ಸೆಟಲ್ ಮೆಂಟ್ ಗಳು ನಡೆಯುತ್ತಿವೆ ಎಂದು ಜಿ.ಲಕ್ಷ್ಮಣ್ ಬಹಿರಂಗಪಡಿಸಿದ್ದಾರೆ. ಮೋನ್ಸನ್ ಮಾವುಂಕಲ್ ಪ್ರಕರಣದಲ್ಲಿ ತನ್ನನ್ನು ಆರೋಪಿಯನ್ನಾಗಿ ಸೇರಿಸುವುದರ ಹಿಂದೆ ಸಿಪಿಎಂ ಕಚೇರಿಯೇ ಮಾಸ್ಟರ್ ಮೈಂಡ್ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ. ಪ್ರತಿವಾದಿಯನ್ನು ಸೇರಿಸಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಈ ಬಹಿರಂಗಪಡಿಸುವಿಕೆ ಅಡಗಿದೆ.