ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ನಿರ್ಮಿಸಿದ ಸಾರ್ವಜನಿಕ ಜನ ಸಹಾಯ ಕೇಂದ್ರವನ್ನು ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಪಂಚಾಯತಿ ಸೌಲಭ್ಯಗಳ ಮಾಹಿತಿ ಹಾಗೂ ಅರ್ಜಿ ಫಾರಂ ಭರ್ತಿ ಕೇಂದ್ರವನ್ನಾಗಿಸಿ ಉದ್ಘಾಟಿಸಲಾಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅವರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯರಾದ ರಮ್ಲ, ಇಂದಿರಾ, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ, ಕುಟುಂಬಶ್ರೀ ಮೆಂಟರ್ ಭವ್ಯ, ಫಾಸರುನ್ನಿಸ, ಕೌನ್ಸಿಲರ್ ಪ್ರಸೀದಾ, ಎಸ್.ಟಿ ಎನ್ಯುಮೇಟರ್ ವನಜಾ,ಗೀತಾ, ಸಿಡಿಎಸ್ ಹಾಗೂ ಕುಟುಂಬಶ್ರೀ ಸದಸ್ಯೆಯರು ಉಪಸ್ಥಿತರಿದ್ದರು.