ಕಾಸರಗೋಡು: ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಬಾಳಿಗೆ ಬೆಳಕಾಗಬೇಕಾಗಿದ್ದ ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಹತ್ತು ವರ್ಷ ಸಮೀಪಿಸುತ್ತಿದ್ದರೂ, ಕಾಮಗಾರಿ ಪೂರ್ತಿಗೊಳಿಸಿ ಆಸ್ಪತ್ರೆ ಕಾರ್ಯಾಚರಿಸದಿರುವುದನ್ನು ಪ್ರತಿಭಟಿಸಿ ಮೂವ್‍ಮೆಂಟ್ ಫಾರ್ ಬೆಟರ್ ಕೇರಳ(ಎಂಬಿಕೆ) ಆಶ್ರಯದಲ್ಲಿ ಶನಿವಾರ ವೈದ್ಯಕೀಯ ಕಾಲೇಜು ಆಸ್ಪತ್ರೆ ಎದುರು ಸಂತ್ರಸ್ತರು ಹಾಗೂ ತಾಯಂದಿರು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.
ಖ್ಯಾತ ಸಾಮಾಜಿಕ ಹೋರಾಟಗಾರ್ತಿ ದಯಾಬಾಯಿ ಮಾತನಾಡಿ ಸ್ವತ: ಉಪವಾಸ ಕುಳಿತು ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಕಾಸರಗೋಡು ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಸರ್ಕಾರ ತೋರುವ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು, ತಕ್ಷಣ ಒಳರೋಗಿ ವಿಭಾಗ ಕಾರ್ಯಾಚರಿಸುವಂತೆ ಮಾಡಬೇಕು. ಇದು ಜಾರಿಯಾಗುವವರೆಗೂ ಹೋರಾಟ ಮುಂದುವರೆಯಲಿದೆ. ಕಾಸರಗೋಡು ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ ಶಿಲಾನ್ಯಾಸ ನಡೆದು 10 ವರ್ಷ ಸಮೀಪಿಸುತ್ತಿದ್ದರೂ, ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಆಸ್ಪತ್ರೆ ಕಾಮಗಾರಿ ಆರಂಭಗೊಳ್ಳುವಾಗ ಜಿಲ್ಲೆಯ ಎಂಡೋ ಸಂತಸ್ರಸ್ತರು ಹಾಗೂ ತಾಯಂದಿರು ಇರಿಸಿರುವ ಭರವಸೆಯೆಲ್ಲ ನುಚ್ಚುನೂರಾಗಿದೆ. ಒಪ್ಪೊತ್ತಿನ ಊಟಕ್ಕೂ ತತ್ವಾರ ಎದುರಿಸುತ್ತಿರುವ ಕೆಲವು ಕುಟುಂಬ ಚಿಕಿತ್ಸೆಗಾಗಿ ಇತರ ಜಿಲ್ಲೆ ಹಾಗೂ ರಾಜ್ಯಗಳಿಗೆ ತೆರಳಬೇಕಾಗಿರುವುದು ದುರಂತ ಎಂದು ತಿಳಿಸಿದರು. ಎಂ.ಬಿ.ಕೆ ಅಧ್ಯಕ್ಷ ಸ್ಯಾಮ್ ಜೋಸ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯ ವಿಧೆಡೆಯಿಂದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆಗಮಿಸಿದ್ದರು. ಜಾತಿ, ಧರ್ಮ, ರಾಜಕೀಯ ಚಿಂತನೆಗಳನ್ನು ಲೆಕ್ಕಿಸದೆ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎಂಡೋಸಲ್ಫಾನ್ ಸಂತ್ರಸ್ತೆ ಹಾಗೂ ಅಂಗವಿಕಲೆಯಾಗಿರುವ ಶ್ರೀನಿಧಿ ಕೇಶವನ್ ಗಾಲಿಕುರ್ಚಿಯಲ್ಲಿ ಕುಳಿತು, ದಯಾಬಾಯಿ ಅವರಿಗೆ ರಿಬ್ಬನ್ ಹಾರ ಹಾಕುವ ಮೂಲಕ ಒಂದು ದಿನದ ಉಪವಾಸ ಆರಂಭಿಸಿದರು. ಎಣ್ಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್., ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಜಿಲ್ಲಾ ಬ್ರಾಹ್ಮಣ ಪರಿಷತ್ ಉಪಾಧ್ಯಕ್ಷ ಜಯನಾರಾಯಣ ತಾಯನ್ನೂರು, ಎಐಐಎಂಎಸ್ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಮುರಳೀಧರನ್ ಪತನ್ನಕ್ಕಾಡ್, ಕೋಶಾಧಿಕಾರಿ ಸಲೀಂ ಚೌಕಿ, ಇತರ ಪದಾಧಿಕಾರಿಗಳಾದ ಆರ್.ಸೂರ್ಯನಾರಾಯಣಭಟ್, ಆನಂದನ್ ಪೆರುಂಬಳ, ಶಿಕ್ಷಕ ಉಮ್ಮು, ರಹಾನಿಸಾ. , ಟಿ.ಇ.ಅನ್ವರ್, ನಾಸರ್ ಕೋಟಿಲಂಗಾಡ್, ಪಿಈಶ್ವರ ಭಟ್ (ಅಧ್ಯಕ್ಷರು, ಹಿರಿಯ ನಾಗರಿಕ ವೇದಿಕೆ, ಬದಿಯಡ್ಕ), ಮುರಳಿ ಪಲ್ಲಂ (ಕೆವಿವಿಇಎಸ್), ವಕೀಲ ಅಬ್ದುಲ್ ಕರೀಂ ಪೂನಾ (ಮಂಗಲ್ಪಾಡಿ ಜನಕೀಯ ವೇದಿಕೆ), ಶಾಜಿ ಕಡಮನ (ಕಿಸಾನ್ ರಕ್ಷಣಾ ಸೇನೆ, ಕಾಸರಗೋಡು), ಕಮರುದ್ದೀನ್ ಪಾತಾಳಟ್ಕ (ಐಎನ್‍ಸಿ), ವಿಲ್ಫ್ರೆಡ್ ಡಿಸೋಜಾ (ಕ್ಯಾಥೋಲಿಕ್ ಚರ್ಚ್, ಬದಿಯಟುಕ್ಕ), ಪಿ.ಎಂ.ಫೈಸಲ್ (ಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ), ತ್ಯಾಂಪನ್ ಮಾಶ್ (ಕೆಎಸ್‍ಎಸ್‍ಪಿಎ), ಶ್ರೀಜಾ ಪುರುಷೋತ್ತಮನ್ (ಮಹಿಳಾ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ), ಬಿಲ್ಡ್-ಅಪ್
ಕಾಸರಗೋಡು ಅಧ್ಯಕ್ಷ ರವೀಂದ್ರನ್ ಕನ್ನಂಕಾಯಿ, ಚಂದ್ರಹಾಸ ರೈ (ಬಂಟರ ಸಂಘ ಜಿಲ್ಲಾ ಉಪಾಧ್ಯಕ್ಷ), ಶುಕೂರ್ ಕಾಣಾಜೆ (ರಾಷ್ಟ್ರೀಯ ಕಿಸಾನ್ ಮಹಾ ಸಂಘ, ರಾಜ್ಯ ಕಾರ್ಯದರ್ಶಿ) ಮತ್ತು ಫಾರೂಕ್ (ಯುವ ಕಾಂಗ್ರೆಸ್ ಕ್ಷೇತ್ರ ಅಧ್ಯಕ್ಷ, ಎಣ್ಮಕಜೆ) ಉಪಸ್ಥಿತರಿದ್ದರು.
ಮೂವ್‍ಮೆಂಟ್ ಫಾರ್ ಬೆಟರ್ ಕೇರಳ (ಎಂಬಿಕೆ) ಕಾಞಂಗಾಡ್ ಕ್ಷೇತ್ರದ ಕಾರ್ಯದರ್ಶಿ ಅಹ್ಮದ್ ಕಿರ್ಮಾನಿ ಸ್ವಾಗತಿಸಿದರು.