ಬದಿಯಡ್ಕ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತಾನುಷ್ಠಾನದ ಸಂದಭರ್À 21ನೇ ದಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಆತ್ರೇಯೀಕೃಷ್ಣಾ ಕೆ.ಕಾರ್ಕಳ ಹಾಡುಗಾರಿಕೆಯಲ್ಲಿ, ಮಹತೀ ಕೆ.ಕಾರ್ಕಳ ವಯೋಲಿನ್‍ನಲ್ಲಿ ಹಾಗೂ ವಿದ್ವಾನ್ ಸುದಾನ ಕೃಷ್ಣ ಅಮೈ ಮೃದಂಗದಲ್ಲಿ ಸಾಥ್ ನೀಡಿದರು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಕಲಾವಿದರನ್ನು ಶ್ರೀದೇವರ ಪ್ರಸಾದ, ಮಂತ್ರಾಕ್ಷತೆಯನ್ನಿತ್ತು ಹರಸಿದರು.