ಕಾಸರಗೋಡು: ಜಿಲ್ಲೆಯಲ್ಲಿ ಮುಂದುವರಿದಿರುವ ಭಾರೀ ಮಳೆ ಮತ್ತು ಜಲಾವೃತ, ಭೂಕುಸಿತದಿಂದ ಹಲವು ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ನಾಳೆ (06.07.2023, ಗುರುವಾರ) ಜಿಲ್ಲೆಯ ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಇಂನ್ಬಾಶೇಖರ್ ಕೆ. ರಜೆ ಘೋಷಿಸಿದ್ದಾರೆ.
ಪೂರ್ವ ನಿಗದಿತ ಪರೀಕ್ಷೆಗಳು ಮತ್ತು ಸಂದರ್ಶನಗಳು ಮುಂದೂಡಲ್ಪಟ್ಟಿದೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ರಜೆಯಿಂದಾಗಿ ನಷ್ಟಗೊಂಡ ಅಧ್ಯಯನದ ಸಮಯವನ್ನು ಸರಿಹೊಂದಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಪಾಲಕರು, ಪೋಷಕರು ಪುಟಾಣಿ ಮಕ್ಕಳನ್ನು ನೀರಾಟ, ಗುಡ್ಡಗಾಡು ಪ್ರದೇಶದೊಳಗೆ ತೆರಳದಂತೆ ಜಾಗ್ರತೆ ವಹಿಸಬೇಕು. ವಿದ್ಯುತ್ ತಂತಿಗಳ ಹಾನಿ, ಭೂಕುಸಿತ, ಮರ ಮತ್ತಿತರ ಅಪಾಯಕಾರಿ ಘಟನೆಗಳಾಗದಂತೆ/ತೀವ್ರ ಕಟ್ಟೆಚ್ಚರದಲ್ಲಿರಬೇಕೆಂದು ಸೂಚಿಸಲಾಗಿದೆ.