ತಿರುವನಂತಪುರಂ: ನಟ ವಿಜಯಕುಮಾರ್ ವಿರುದ್ಧ ಪುತ್ರಿ ಹಾಗೂ ನಟಿ ಅರ್ಥನಾ ಬಿನು ಆರೋಪ ಮಾಡಿದ್ದಾರೆ. ವಿಜಯಕುಮಾರ್ ಅವರು ಗೋಡೆ ಹಾರಿ ಮನೆಗೆ ಪ್ರವೇಶಿಸಲು ಯತ್ನಿಸಿದರು ಮತ್ತು ಪೋಲೀಸರಿಗೆ ಕರೆ ಮಾಡಿದರೂ ಯಾರೂ ಸಹಾಯ ಮಾಡಲಿಲ್ಲ ಎಂದು ಅರ್ಥನಾ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ವಿಜಯಕುಮಾರ್ ಗೋಡೆ ಹಾರಿ ಕಿಟಕಿಯ ಮೂಲಕ ಬೆದರಿಕೆ ಹಾಕುತ್ತಿರುವ ದೃಶ್ಯಗಳನ್ನೂ ಅರ್ಥಾನಾ ಹಂಚಿಕೊಂಡಿದ್ದಾರೆ.
ತಂದೆ ವಿಜಯಕುಮಾರ್ ಮತ್ತು ತಾಯಿ ಬೇರೆಯಾಗಿದ್ದಾರೆ. ತನ್ನ ತಾಯಿ, 85 ವರ್ಷದ ಅಜ್ಜಿ, ಸಹೋದರಿ ಮತ್ತು ತಾನು ಒಂದೇ ಮನೆಯಲ್ಲಿದ್ದೇವೆ. ತಂದೆ ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ಇದರ ವಿರುದ್ಧ ಹಲವು ದೂರುಗಳು ನೀಡಿರುವುದರಿಂದ ಪ್ರಕರಣ ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲೇ ಈಗ ಮನೆಗೆ ನುಗ್ಗಿ ಬೆದರಿಕೆ ಹಾಕಲಾಗಿದೆ ಎಂದೂ ಅರ್ಥನಾ ಹೇಳುತ್ತಾರೆ.
ನಇನ್ನೆ ಬೆಳಗ್ಗೆ ಮನೆಗೆ ಬಂದಿದ್ದರು. ಬಾಗಿಲು ಮುಚ್ಚಿದ್ದರಿಂದ ಕಿಟಕಿ ಮೂಲಕ ಬೆದರಿಸಿದ್ದಾರೆ. ಅವರು ತನ್ನ ಸಹೋದರಿ ಮತ್ತು ಅಜ್ಜಿಗೆ ಬೆದರಿಕೆ ಹಾಕಿದಾಗ, ತಾನು ಅವರೊಂದಿಗೆ ಮಾತನಾಡಲು ನಿರ್ಧರಿಸಿದೆ. ಆಗವರು ತಾನು ಚಲನಚಿತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸದಿದ್ದರೆ ಸರ್ವನಾಶಗೊಳಿಸುವುದಾಗಿ ಬೆದರಿಕೆ ಹಾಕಿದರು. ಜೀವನೋಪಾಯಕ್ಕಾಗಿ ಅಜ್ಜಿ ಮಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಅರ್ಥನಾ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.