ಜೈಪುರ: ಚಾಲಕನ ನಿಯಂತ್ರಣ ಕಳೆದುಕೊಂಡ ಆಂಬ್ಯುಲೆನ್ಸ್ ಒಂದು ಅಡ್ಡಾದಿಡ್ಡಿಯಾಗಿ ಚಲಿಸಿ, ಇನ್ನೇನು ಕಂದಕಕ್ಕೆ ಬೀಳುವಷ್ಟರಲ್ಲಿ, ಪವಾಡಸದೃಶ ರೀತಿಯಲ್ಲಿ ಅಲ್ಲಿನ ರಕ್ಷಣಾಗೋಡೆಯಲ್ಲೇ ಸಿಲುಕಿದ ಸಿನಿಮೀಯ ಘಟನೆ ರಾಜಸ್ಥಾನದ ಕರಣ್ಪುರ ಕಣಿವೆಯಲ್ಲಿರುವ ರಸ್ತೆಯಲ್ಲಿ ನಡೆದಿದೆ.

ಕಂದಕದ ಸುತ್ತ ನಿರ್ಮಿಸಲಾಗಿರುವ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದಿರುವ ಆಂಬ್ಯುಲೆನ್ಸ್, ಇನ್ನೇನು ಕೆಳಗೆ ಬೀಳಬೇಕಿತ್ತು. ಆದರೆ, ಅದೃಷ್ಟವಶಾತ್ ಅಲ್ಲಿಯೇ ಜೋತು ಬಿದ್ದಿತು. ವಾಹನದ ಮುಂಭಾಗದ ಎರಡೂ ಚಕ್ರಗಳು ನೇತಾಡುತ್ತಿದ್ದರೆ, ವಾಹನದ ಮುಕ್ಕಾಲು ಭಾಗ ರಸ್ತೆಯ ಮೇಲಿತ್ತು. ಕೊನೆಗೆ ವಾಹನ ಕಂದಕಕ್ಕೆ ಬೀಳದಂತೆ ರಕ್ಷಣೆ ಮಾಡಲಾಯಿತು.
ಆಂಬ್ಯುಲೆನ್ಸ್ ಒಳಗೆ ಚಾಲಕ ಮತ್ತು ಕಾಂಪೌಂಡರ್ ಇದ್ದರು. ಬ್ಯಾಲೆನ್ಸ್ ತಪ್ಪಿ ಕಂದಕಕ್ಕೆ ಬೀಳುವ ಭಯದಲ್ಲಿದ್ದ ಇಬ್ಬರು ತಮ್ಮ ಸೀಟಿನಿಂದ ಸ್ವಲ್ಪವೂ ಕದಲದ ಸ್ಥಿತಿಯಲ್ಲಿದ್ದರು. ಘಟನೆ ನಡೆದ ಹಲವು ಗಂಟೆಗಳವರೆಗೂ ಇಬ್ಬರೂ ಸ್ವಲ್ಪವೂ ಕದಲದೆ ಕುಳಿತಿದ್ದರು.
ಅಂತಿಮವಾಗಿ, ವಾಹನವನ್ನು ಗಮನಿಸಿದ ಸ್ಥಳೀಯರು ಸಕಾಲಕ್ಕೆ ನೆರವಿಗೆ ಧಾವಿಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಇಬ್ಬರು ಪವಾಡವೆಂಬಂತೆ ಬದುಕುಳಿದಿದ್ದಾರೆ. ಇಬ್ಬರಿಗೂ ಸಣ್ಣ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.