ಕಾಸರಗೋಡು: ಸ್ವ-ಉದ್ಯೋಗಕ್ಕಾಗಿ ಸಾಲವನ್ನು ಪಡೆಯಲು ಸ್ವಂತ ಆಸ್ತಿ ಅಥವಾ ಮನೆ ಇಲ್ಲದಿರುವ ವಿಕಲಾಂಗರಿಗೆ ಸೂಕ್ಷ್ಮ ಯಾ ಸಣ್ಣ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಲು ರೂ.25,000 ವರೆಗೆ ಆರ್ಥಿಕ ನೆರವು ನೀಡುವ ಸಾಂತ್ವನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಶೇಕಡಾ 40ರಷ್ಟು ಅಥವಾ ಅದಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿದವರಾಗಿದ್ದು, 18 ವರ್ಷ ಪ್ರಾಯ ಪೂರ್ಣಗೊಳಿಸಿದವರಾಗಿರಬೇಕು. ಯಾವುದೇ ಮೇಲಾಧಾರವನ್ನು ಹೊಂದಿರದ ಮತ್ತು ಕಾಪೆರ್Çರೇಷನ್ ಅಥವಾ ಇತರ ಸರ್ಕಾರಿ ಸಂಸ್ಥೆಗಳಿಂದ ಯಾವುದೇ ಸಬ್ಸಿಡಿ ಸಾಲ ಅಥವಾ ಹಣಕಾಸಿನ ನೆರವು ಪಡೆದಿರಬಾರದು.ತೀವ್ರ ಅಂಗವೈಕಲ್ಯ ಹೊಂದಿದ, ಅಂಗವಿಕಲ ವಿಧವೆಯರು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅಂಗವಿಕಲರು, 14 ವರ್ಷಕ್ಕಿಂತ ಮೇಲ್ಪಟ್ಟ ಮಾನಸಿಕ ಅಸ್ವಸ್ಥ ಮಕ್ಕಳ ಪೆÇೀಷಕರು, ಹಿರಿಯ ಅಂಗವಿಕಲರು, ನಿರ್ಗತಿಕರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸ್ವೀಕಾರದ ಕೊನೆಯ ದಿನಾಂಕ ಆಗಸ್ಟ್ 10 ಆಗಿದ್ದು, ಅರ್ಜಿ ಮತ್ತು ಹೆಚ್ಚಿನ ವಿವರಗಳು ವೆಬ್ ಸೈಟ್ www.hpwc.kerala.gov.in ನಲ್ಲಿ ಲಭ್ಯವಿದೆ. ಈ ಬಗ್ಗೆ ಮಾಃಇತಿಗಾಗಿ ದೂರವಾಣಿ ಸಂಖ್ಯೆ (04994 255074)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.