HEALTH TIPS

ಹೆಲ್ಮೆಟ್​ ಧರಿಸದಿದ್ದಕ್ಕೆ ಆಟೋ ಚಾಲಕನಿಗೆ ದಂಡ: ಪಾವತಿಸದೇ ಸುಮ್ಮನಿದ್ದವನಿಗೆ ಕಾದಿತ್ತು ಶಾಕ್​

             ತಿರುವನಂತಪುರ: ಹೆಲ್ಮೆಟ್​ ಧರಿಸಿಲ್ಲ ಅಂತ ಹೇಳಿ ಆಟೋ ಡ್ರೈವರ್​ ಒಬ್ಬರಿಗೆ 500 ರೂ. ದಂಡ ವಿಧಿಸಿರುವ ವಿಚಿತ್ರ ಘಟನೆ ಕೇರಳದ ತಿರುವನಂತಪುರದ ಬಲರಾಮಪುರದಲ್ಲಿ ನಡೆದಿದೆ. ಈ ಪ್ರಕರದಿಂದ ಅಸಮಾಧಾನಗೊಂಡಿರುವ ಆಟೋ ಚಾಲಕ ಇದೀಗ ಹೆಲ್ಮೆಟ್​ ಧರಿಸಿ ಡ್ರೈವಿಂಗ್​ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.

              ಆಟೋ ನಂಬರ್​ KL20R 6843 ವಿರುದ್ಧ ಪೊಲೀಸರು ಈ ವಿಚಿತ್ರ ಕ್ರಮ ತೆಗೆದುಕೊಂಡಿದ್ದಾರೆ. ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ ಸಂಚಾರಿ ಪೊಲೀಸರು ಸಫರುಲ್ಲಾಗೆ ಕಳೆದ ವರ್ಷ ಡಿಸೆಂಬರ್ 3 ರಂದು 500 ರೂಪಾಯಿ ದಂಡ ಪಾವತಿಸಲು ಚಲನ್ ನೀಡಿದ್ದರು. ಕ್ಯಾಮೆರಾ ಅಳವಡಿಸುವ ಮುನ್ನವೇ ಈ ಘಟನೆ ನಡೆದಿದ್ದು, ಪೊಲೀಸರ ಕಡೆಯಿಂದ ಸಣ್ಣ ತಪ್ಪಾಗಿರಬಹುದು ಅಂದುಕೊಂದು ಸಫರುಲ್ಲಾ ದಂಡ ಕಟ್ಟಿರಲಿಲ್ಲ.


              ದಂಡ ಕಟ್ಟದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್​ ನೋಟಿಸ್​ ಯಾವಾಗ ಬಂತೋ ಅದರಿಂದ ಆಘಾತಕ್ಕೆ ಒಳಗಾದ ಸಫರುಲ್ಲಾ, ಇದೀಗ ಹೆಲ್ಮೆಟ್​ ಧರಿಸಿ ಹೆಲ್ಮೆಟ್ ಧರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೆ, ಪೊಲೀಸರು ಆಟೋ ಚಾಲಕರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

                   ಆಟೋ ಬಲರಾಮಪುರಂ ಮೂಲದ ಶೇಮೀರ್ ಅವರದ್ದು. ಈ ನಡುವೆ ಬಲರಾಮಪುರಂ ಪೊಲೀಸರು ಚಲನ್‌ ನೀಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಟ್ರಾಫಿಕ್ ಘಟಕದಿಂದ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದು ಕ್ಲೆರಿಕಲ್ ಮಿಸ್ಟೇಕ್​ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries