ಇಂಫಾಲ:ಮಣಿಪುರದಲ್ಲಿ ಗಲಭೆಕೋರ ಗುಂಪುಗಳ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಇದೀಗ ಪರಸ್ಪರ ವೈರಿ ಪಡೆಗಳ ಚಲನವಲನಗಳನ್ನು ಗಮನಿಸಲು ಈ ಗುಂಪುಗಳು 'ಕ್ವಾಡ್‌ಕಾಪ್ಟರ್'ಗಳನ್ನು(ಡ್ರೋನ್) ಬಳಕೆ ಮಾಡುತ್ತಿರುವುದು ಸೇನೆಯ ಗಮನಕ್ಕೆ ಬಂದಿದೆ.
ಇಂಫಾಲ:ಮಣಿಪುರದಲ್ಲಿ ಗಲಭೆಕೋರ ಗುಂಪುಗಳ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಇದೀಗ ಪರಸ್ಪರ ವೈರಿ ಪಡೆಗಳ ಚಲನವಲನಗಳನ್ನು ಗಮನಿಸಲು ಈ ಗುಂಪುಗಳು 'ಕ್ವಾಡ್‌ಕಾಪ್ಟರ್'ಗಳನ್ನು(ಡ್ರೋನ್) ಬಳಕೆ ಮಾಡುತ್ತಿರುವುದು ಸೇನೆಯ ಗಮನಕ್ಕೆ ಬಂದಿದೆ.
'ಇಂಪಾಲದ ಕಣಿವೆ ಪ್ರದೇಶದಲ್ಲಿ ಮೈತೇಯಿ ಸಮುದಾಯದ ಜನರು ವಾಸಿಸುತ್ತಿದ್ದಾರೆ.
ಮಣಿಪುರದ ನೈಋತ್ಯ ಭಾಗದಲ್ಲಿರುವ ಫೌಗಕ್‌ಚಾವೊ, ಕಾಂಗ್‌ವೈ ಬಜಾರ್ ಮತ್ತು ಟೊರ್ಬಂಗ್ ಬಜಾರ್‌ನಂತಹ ಸ್ಥಳಗಳಲ್ಲಿ ಕ್ವಾಡ್‌ಕಾಪ್ಟರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿವೆ. ಈ ಪ್ರದೇಶದಲ್ಲಿ ಸೇನಾ ಪಡೆ ಬಿಗಿ ಭದ್ರತೆ ಒದಗಿಸಿದೆ ಎಂದು ತಿಳಿಸಿದೆ.
ಕ್ವಾಡ್‌ಕಾಪ್ಟರ್‌ಗಳು ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುತ್ತಿರುವುದೇ ಇವುಗಳ ಬಳಕೆಗೆ ಕಾರಣ ಎಂದು ತಿಳಿದುಬಂದಿದೆ.
ಗಲಭೆ ಆರಂಭದ ಹಂತದಲ್ಲಿ ಸೇನೆ ಕ್ವಾಡ್‌ಕಾಪ್ಟರ್‌ಗಳನ್ನು ಬಳಸಿ ಜನರನ್ನು ರಕ್ಷಿಸಿತ್ತು. ಸೇನೆಯ ಕ್ವಾಡ್‌ಕಾಪ್ಟರ್‌ಗಳನ್ನು ಬಂಡುಕೋರರು ಕಲ್ಲು ಹೊಡೆದು ಕೆಳಗುರುಳಿಸಿದ್ದರು.