ಮುಳ್ಳೇರಿಯ: ಕೋಟೂರು ಕಾರ್ತಿಕೇಯ ಕಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಆಚರಣೆಯ ಅಂಗವಾಗಿ ಲಾಂಛನ ಬಿಡುಗಡೆ ಮತ್ತು ಮಹಾಸಭೆ ಶಾಲೆಯಲ್ಲಿ ಸಂಪನ್ನವಾಯಿತು.
ಮುಳಿಯಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿ ವಿ ಮಿನಿ ಲಾಂಛನ ಬಿಡುಗಡೆಗೊಳಿಸಿದರು. ಗ್ರಾ.ಪಂ.ಸದಸ್ಯೆ ಶ್ಯಾಮಲಾ ಅಧ್ಯಕ್ಷತೆ ವಹಿಸಿದ್ದರು. ಆಚರಣ ಸಮಿತಿ ಕೋಶಾಧಿಕಾರಿ ಪಿ ಕುಂಞÂ ಕಣ್ಣನ್ ನಾಯರ್, ಶಾಲಾ ರಕ್ಷಕ-ಶಿಕ್ಷಕ ಸಮಿತಿ ಅಧ್ಯಕ್ಷ ಶಿವಶಂಕರನ್, ಸಿ ಅಚ್ಚುತನ್, ಗೋಪಾಲನ್ ಕೆ, ಪ್ರಚಾರ ಸಮಿತಿ ಸಂಚಾಲಕ ಗೋವಿಂದ ಬಳ್ಳಮೂಲೆ, ಜೋಮಿ ಟೀಚರ್, ಶ್ರೀವತ್ಸ ಮಾಸ್ತರ್ ಉಪಸ್ಥಿತರಿದ್ದು ಮಾತನಾಡಿದರು.
ವಜ್ರಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಪಿ ಬಾಲಕೃಷ್ಣನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಸುಕುಮಾರಿ ವಂದಿಸಿದರು.