ತಿರುವನಂತಪುರಂ: ರಾಜ್ಯದಲ್ಲಿ ದಿನನಿತ್ಯ ನಾಪತ್ತೆಯಾಗುವ ಮಕ್ಕಳ ಸಂಖ್ಯೆಯಲ್ಲಿ ಆತಂಕಕಾರಿ ರೀತಿಯಲ್ಲಿ ಏರಿಕೆಯಾಗುತ್ತಿದೆ.
ಮಕ್ಕಳ ಮೇಲಿನ ದೌರ್ಜನ್ಯದಲ್ಲೂ ಕಡಿಮೆ ಇಲ್ಲ. 2015ರಲ್ಲಿ 145 ಮಕ್ಕಳ ಅಪಹರಣವಾಗಿದ್ದು, 2017ರಲ್ಲಿ 164ಕ್ಕೆ ಏರಿಕೆಯಾಗಿದೆ. 2018ರ ಮೊದಲ ಎರಡು ತಿಂಗಳಲ್ಲೇ 23 ಮಕ್ಕಳು ನಾಪತ್ತೆಯಾಗಿದ್ದರು. 2019ರಲ್ಲಿ ಇದು 267ಕ್ಕೆ ಏರಿಕೆಯಾಗಿದೆ. 2020 ರಿಂದ, ರಾಜ್ಯದಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳ ಸಂಖ್ಯೆಯೂ ಭಾರಿ ಏರಿಕೆ ಕಂಡಿದೆ. 2020 ರಲ್ಲಿ 8742 ಪ್ರಕರಣಗಳು, 2021 ರಲ್ಲಿ 9713 ಪ್ರಕರಣಗಳು, 2022 ರಲ್ಲಿ 11259 ಪ್ರಕರಣಗಳು ಮತ್ತು ಈ ವರ್ಷ ಇದುವರೆಗೆ 5878 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶೇಕಡ 40ರಷ್ಟು ಪ್ರಕರಣಗಳಲ್ಲಿ ಮಕ್ಕಳು ಕಾಣೆಯಾಗಿರುವ ಘಟನೆಗಳು ವರದಿಯಾಗಿವೆ.
ರಾಜ್ಯದಲ್ಲಿ ಭಿಕ್ಷಾಟನೆ ಮಾಫಿಯಾ, ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ತನಿಖೆಯಲ್ಲಿ ಪ್ರಗತಿ ಕಾಣದೆ ಪ್ರಕರಣಗಳು ರಾಶಿ ರಾಶಿಯಾಗುತ್ತಿವೆ. ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾದಂತೆ ಪ್ರಕರಣಗಳ ತನಿಖೆಗೆ ಪೆÇಲೀಸರು ವಿಫಲರಾಗಿರುವುದು ಟೀಕೆಗೆ ಕಾರಣವಾಗಿದೆ. ರಾಜ್ಯದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ.
ಕಳೆದ ಐದು ವರ್ಷಗಳಲ್ಲಿ ನಾಪತ್ತೆಯಾಗಿರುವ 61 ಮಕ್ಕಳನ್ನು ಪೋಲೀಸರು ಇನ್ನೂ ಪತ್ತೆ ಹಚ್ಚಿಲ್ಲ. ಇವುಗಳಲ್ಲಿ ಆರು ಪ್ರಕರಣಗಳನ್ನು ಸಂಬಂಧಿತ ನ್ಯಾಯಾಲಯಗಳಿಗೆ ಸಲ್ಲಿಸಲಾಗಿದ್ದು, ಅವುಗಳನ್ನು ಪತ್ತೆಹಚ್ಚಲಾಗದು ಎಂದು ಪರಿಗಣಿಸುವಂತೆ ಕೋರಲಾಗಿದೆ. ಈ ಮಕ್ಕಳನ್ನು ಭಿಕ್ಷಾಟನೆ ಮಾಫಿಯಾ ಅಥವಾ ಮಾನವ ಕಳ್ಳಸಾಗಣೆ ಗ್ಯಾಂಗ್‍ಗಳು ಅಪಹರಿಸಿದ್ದಾರೆಯೇ ಎಂಬುದು ಕೂಡ ಸ್ಪಷ್ಟವಾಗಿಲ್ಲ. ನಾಪತ್ತೆಯಾದವರಲ್ಲಿ 43 ಬಾಲಕರು ಮತ್ತು 18 ಬಾಲಕಿಯರು ಸೇರಿದ್ದಾರೆ. ಈ ಅಂಕಿ ಅಂಶವು 2018 ರಿಂದ ಮೇ 2023 ರವರೆಗೆ ಇದೆ.