HEALTH TIPS

ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

                ವದೆಹಲಿ: ತಂತ್ರಜ್ಞಾನದ ಅತ್ಯಾಧುನಿಕತೆ ಕುರಿತು ಮಾತುಗಳು ಉತ್ಪ್ರೇಕ್ಷೆಗೆ ತಲುಪಿದಾಗೆಲ್ಲ 'ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬಂದರೂ ಅಚ್ಚರಿ ಇಲ್ಲ' ಎನ್ನುವ ಮಾತೊಂದನ್ನು ಅಲ್ಲಿ ಇಲ್ಲಿ ಕೇಳಿರುತ್ತೇವೆ. ಅಂಥ ಕಾಲ ಬರುತ್ತದೋ ಇಲ್ಲವೋ.. ಈಗಲೇ ಆ ಕುರಿತು ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ.

                ಆದರೆ ಅಪ್ಪ-ಅಮ್ಮ ಇಲ್ಲದೆ ಮಕ್ಕಳನ್ನು ಹುಟ್ಟಿಸುವ ಪ್ರಯತ್ನವೊಂದು ಈ ಮಧ್ಯೆ ನಡೆಯುತ್ತಿದೆ.

                 ಇಲ್ಲಿ ಮಗು ಹುಟ್ಟಲು ಎರಡು ದೇಹಗಳ ಸಮಾಗಮ ಆಗಬೇಕಾಗಿಲ್ಲ. ಅಷ್ಟಕ್ಕೂ ಇಲ್ಲಿ ಅಪ್ಪ-ಅಮ್ಮನೇ ಬೇಕಾಗಿಲ್ಲ. ಒಂದೇ ಒಂದು ಕೋಶದಿಂದ ಮಗುವನ್ನು ಸೃಷ್ಟಿಸುವಂಥ ಪ್ರಯತ್ನ ನಡೆಯುತ್ತಿದ್ದು, ಇದು ಸಾಧ್ಯವಾದರೆ ಇಲ್ಲಿ ಹುಟ್ಟುವ ಪ್ರತಿ ಮಗುವಿಗೂ ವಿಜ್ಞಾನಿಗಳೇ ತಂದೆ-ತಾಯಿ!

ಇನ್​ವಿಟ್ರೊ ಗೆಮೆಟೊಜೆನಿಸಿಸ್​ (ಐವಿಜಿ) ಎಂದು ಕರೆಯಲಾಗುವ ಈ ತಂತ್ರಜ್ಞಾನದ ಮೂಲಕ ಗಂಡು-ಹೆಣ್ಣಿನ ಅಗತ್ಯವೇ ಇರದೆ ಮಗುವನ್ನು ಹುಟ್ಟಿಸುವ ಪ್ರಯತ್ನವೊಂದಕ್ಕೆ ಕಂಪನಿಯೊಂದು ಮುಂದಾಗಿದೆ. ಕ್ಯಾಲಿಫೋರ್ನಿಯಾದ ಸ್ಟಾರ್ಟಪ್ ಆಗಿರುವ, ಕಾನ್ಸೆಪ್ಷನ್ ಎಂಬ ಬಯೋಟೆಕ್ ಕಂಪನಿಯೊಂದು ಇಂಥ ಪ್ರಯತ್ನದಲ್ಲಿದೆ.

                    ಯಾರದ್ದೇ ದೇಹದ ಯಾವುದೇ ಭಾಗದಿಂದ ಜೀವಕೋಶವನ್ನು ಪಡೆದು ಅದರಿಂದ ಕೃತಕವಾಗಿ ಅಂಡಾಣು ಹಾಗೂ ವೀರ್ಯಾಣು ಎರಡನ್ನೂ ಸೃಷ್ಟಿಸಿ ಪ್ರಯೋಗಾಲಯದಲ್ಲೇ ಮಗುವನ್ನು ಹುಟ್ಟಿಸುವಂಥ ಪ್ರಯತ್ನಕ್ಕೆ ಈ ಕಂಪನಿ ಮುಂದಾಗಿದೆ. ಇದು ಸಾಧ್ಯವಾದರೆ ಮಕ್ಕಳಿಲ್ಲದ ದಂಪತಿಗೆ ಇದು ವರವಾಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ. ಮಾತ್ರವಲ್ಲ ತೃತೀಯಲಿಂಗಿ ದಂಪತಿ, ತಮ್ಮನ್ನು ತಾವೇ ಮದುವೆಯಾಗುವಂಥ ವಿಚಿತ್ರ ವ್ಯಕ್ತಿಗಳಿಗೂ ಇದು ಮಕ್ಕಳನ್ನು ಪಡೆಯಲು ನೆರವಾಗುತ್ತದೆ.

                 ಸದ್ಯ ಇಬ್ಬರು ಜೈವಿಕ ತಂದೆಯರಿಂದ ಇಲಿಯನ್ನು ಹುಟ್ಟಿಸುವಲ್ಲಿ ಈ ತಂತ್ರಜ್ಞಾನ ಯಶಸ್ವಿಯಾಗಿದ್ದು, ಮಾನವರಲ್ಲಿ ಇದನ್ನು ಅಳವಡಿಸುವ ಕುರಿತ ಸಂಶೋಧನೆಗಳು ನಡೆಯುತ್ತಿವೆ, ಅದಕ್ಕೆ ಕೆಲವು ವರ್ಷಗಳೇ ಬೇಕಾಗುತ್ತವೆ ಎಂದು ಕಾನ್ಸೆಪ್ಷನ್ ಸಂಸ್ಥೆಯ ಸಹ ಸಂಸ್ಥಾಪಕ ಮ್ಯಾಟ್ ಕ್ರಿಸಿಲಾಫ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries