HEALTH TIPS

ಮ್ಯಾನ್ಮಾರ್ ವಲಸಿಗರ ಬಯೊಮೆಟ್ರಿಕ್‌ ಪಡೆಯಲು ಕ್ರಮ

Top Post Ad

Click to join Samarasasudhi Official Whatsapp Group

Qries

               ಗುವಾಹಟಿ: ಮೈತೇಯಿ ಸಮುದಾಯದವರ ಬೃಹತ್ ರ‍್ಯಾಲಿ ಹಿಂದೆಯೇ ಮಣಿಪುರ ಆಡಳಿತವು ಮ್ಯಾನ್ಮಾರ್‌ನಿಂದ 'ಅಕ್ರಮವಾಗಿ ವಲಸೆ' ಬಂದಿರುವವರ ಬಯೊಮೆಟ್ರಿಕ್ ವಿವರ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

               ರಾಜ್ಯದಲ್ಲಿ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಹಾಗೂ 'ಕುಕಿ ಭಯೋತ್ಪಾದಕ'ರ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿ ಮೈತೇಯಿ ಸಮುದಾಯದವರು ರ‍್ಯಾಲಿ ನಡೆಸಿದ್ದರು.

               ಇಂಫಾಲ್‌ ಪೂರ್ವ ಜಿಲ್ಲೆಯ ಸೈಜ್ವಾದಲ್ಲಿರುವ ಶಿಬಿರದಲ್ಲಿ ಬಯೊಮೆಟ್ರಿಕ್‌ ವಿವರ ಸಂಗ್ರಹಿಸುವ ಕಾರ್ಯ ನಡೆಯಿತು. ಈ ಶಿಬಿರದಲ್ಲಿ ಒಟ್ಟು 105 ಮ್ಯಾನ್ಮಾರ್ ವಲಸಿಗರನ್ನು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

               ರ‍್ಯಾಲಿ: ಮಣಿಪುರ ಏಕತಾ ಸಂಯೋಜನಾ ಸಮಿತಿ (ಸಿಒಸಿಒಎಂಐ) ನೇತೃತ್ವದಲ್ಲಿ ಮೈತೇಯಿ ಜನರ ವಿವಿಧ ಸಂಘಟನೆಗಳು ಶನಿವಾರ ಇಂಫಾಲ್‌ದಲ್ಲಿ ಬೃಹತ್ ರ‍್ಯಾಲಿ ನಡೆಸಿದರು. ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿಗೊಳಿಸಬೇಕು ಮತ್ತು ಕುಕಿ ಜನರು ವಾಸವಿರುವ ಪ್ರದೇಶಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಇರಬೇಕು ಎಂದು ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಯಿತು.

                   ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯಿಸಿ 'ಇಂಡಿಯಾ' ನಾಯಕರಿಗೆ ಪತ್ರ: ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಎಂದು ಸ್ಥಳೀಯ ಬುಡಕಟ್ಟು ಜನರ ಸಂಘಟನೆ ಇಂಡಿಜಿನೀಯಸ್‌ ಟ್ರೈಬಲ್ ಲೀಡರ್ಸ್ ಫೋರಂ (ಐಟಿಎಲ್‌ಎಫ್‌) ಆಗ್ರಹಪಡಿಸಿದೆ.

                 ಇದರ ಜೊತೆಗೆ ಬುಡಕಟ್ಟು ಸಮುದಾಯದವರಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಜಾರಿಗೊಳಿಸಲು ಒತ್ತಾಯಿಸಿದ್ದು, ತಮ್ಮ ಬೇಡಿಕೆಗೆ ಬೆಂಬಲ ಪಡೆಯಲು ವಿರೋಧಪಕ್ಷಗಳ ಮೈತ್ರಿಕೂಟ 'ಇಂಡಿಯಾ' ನಾಯಕರನ್ನು ಸಂಪರ್ಕಿಸಿದೆ.

              ಇದನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಹಾಗೂ ನಮ್ಮ ಸ್ಥಿತಿ ಕುರಿತು ದೇಶದ ಗಮನಸೆಳೆಯಬೇಕು. ಹಿಂಸೆ ತಡೆಯಲು ತಕ್ಷಣವೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು 'ಇಂಡಿಯಾ' ಮುಖಂಡರಿಗೆ ಬರೆದ ಪತ್ರದಲ್ಲಿ ಐಟಿಎಲ್‌ಎಫ್‌ ಒತ್ತಾಯಿಸಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries