ಬಿಷ್ಣುಪುರ : ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಯೋಧರು ರಕ್ಷಣಾ ಕಾರ್ಯಗಳಿಗೆ ಡ್ರೋನ್‌ಗಳನ್ನು ಬಳಸಿದರೆ, ಗಲಭೆಕೋರರ ಗುಂಪುಗಳು ಕೂಡ ಪರಸ್ಪರ ಗುರಿಯಾಗಿಸಲು ಇವುಗಳನ್ನೇ ಬಳಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಇಂಫಾಲ್‌ನ ಕಣಿವೆ ಪ್ರದೇಶಗಳಲ್ಲಿ ಮೈತೇಯಿ ಸಮುದಾಯಕ್ಕೆ ಸೇರಿರುವ ಗಲಭೆಕೋರರು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಕುಕಿ ಬುಡಕಟ್ಟಿಗೆ ಸೇರಿದ ಗಲಭೆಕೋರರು ಪರಸ್ಪರರ ಚಲನವಲನಗಳನ್ನು ಪತ್ತೆ ಹಚ್ಚಲು ಡ್ರೋನ್‌ಗಳನ್ನು (ಕ್ವಾಡ್‌ಕಾಪ್ಟರ್) ಬಳಸುತ್ತಿರುವುದು ಗಮನಕ್ಕೆ ಬಂದಿರುವುದಾಗಿ ಭದ್ರತಾ ಪಡೆಗಳು ತಿಳಿಸಿವೆ.
ಮಣಿಪುರದ ನೈಋತ್ಯ ಭಾಗದ ಫೌಗಾಕ್ಚಾವೊ, ಕಾಂಗ್ವೈ ಬಜಾರ್ ಮತ್ತು ಟೊರ್ಬಂಗ್ ಬಜಾರ್ ಪ್ರದೇಶಗಳಲ್ಲಿ ಎರಡೂ ಗುಂಪಿನವರು ಡ್ರೋನ್‌ಗಳನ್ನು ಬಳಸುತ್ತಿರುವುದು ಗಮನಕ್ಕೆ ಬಂದಿರುವ ಕಾರಣ ಈ ಪ್ರದೇಶವನ್ನು ಭದ್ರತಾ ಪಡೆಗಳು ಬಫರ್ ವಲಯಗಳಾಗಿ ಘೋಷಿಸಿವೆ.
ಎರಡೂ ಕಡೆಯವರೂ ಇಂತಹ ಡ್ರೋನ್‌ಗಳನ್ನು ಗುಂಡು ಹಾರಿಸಿ ಹೊಡೆದುರುಳಿಸುತ್ತಿದ್ದಾರೆ ಎಂದು ಮೂಲಗಳು ವಿವರಿಸಿವೆ.
ಗಲಭೆಪೀಡಿತ ಪ್ರದೇಶದಿಂದ ಎರಡು ಸಾವಿರ ಮಂದಿಯನ್ನು ರಕ್ಷಣೆ ಮಾಡಲು ಭದ್ರತಾ ಪಡೆಗಳಿಗೆ ಡ್ರೋನ್‌ಗಳು ನೆರವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.