ತಿರುವನಂತಪುರ: ಅಮೀಬಾದಿಂದ ಉಂಟಾಗುವ ಮೆನಿಂಗೊಎನ್ಸೆಫಾಲಿಟಿಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಬಹಳ ಅಪರೂಪವಾಗಿ ಹತ್ತು ಸಾವಿರ ಜನರಲ್ಲಿ ಒಬ್ಬರು ಈ ಕಾಯಿಲೆಗೆ ತುತ್ತಾಗುತ್ತಾರೆ.
ಪೀಡಿತ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮೊದಲು ರಾಜ್ಯದಲ್ಲಿ 5 ಮಂದಿ ಈ ಕಾಯಿಲೆಗೆ ತುತ್ತಾಗಿದ್ದರು. 2016ರಲ್ಲಿ ಅಲಪ್ಪುಳ ಜಿಲ್ಲೆಯ ತಿರುಮಲ ವಾರ್ಡ್‍ನಲ್ಲಿ ಮಗುವೊಂದು ಇದೇ ಕಾಯಿಲೆಗೆ ತುತ್ತಾಗಿತ್ತು. 2019 ಮತ್ತು 2020 ರಲ್ಲಿ ಮಲಪ್ಪುರಂ, 2020 ರಲ್ಲಿ ಕೋಝಿಕ್ಕೋಡ್ ಮತ್ತು 2022 ರಲ್ಲಿ ತ್ರಿಶೂರ್ ಕಂಡು ಬಂದಿತ್ತು. ಈ ರೋಗದ ಮರಣ ಪ್ರಮಾಣವು 100 ಪ್ರತಿಶತದ ಹತ್ತಿರದಲ್ಲಿದೆ. ಇವು ಕೇರಳದಲ್ಲಿ ಕಂಡು ಬರುತ್ತಿರುವುದು ವಿಶೇx ಎಂದು ಸಚಿವರು ಹೇಳಿದರು.
ಅಮೀಬಾಗಳು ಸ್ವತಂತ್ರವಾಗಿ ಜೀವಿಸುತ್ತವೆ, ಪರಾವಲಂಬಿಯಲ್ಲದವು ಮತ್ತು ಸಾಮಾನ್ಯವಾಗಿ ನಿಶ್ಚಲವಾಗಿರುವ ಜಲಮೂಲಗಳಲ್ಲಿ ಕಂಡುಬರುತ್ತವೆ. ಅಮೀಬಾ ಬ್ಯಾಕ್ಟೀರಿಯಾಗಳು ಚರಂಡಿ ಅಥವಾ ಕೊಳಗಳಲ್ಲಿ ಸ್ನಾನ ಮಾಡುವ ಮೂಲಕ ಮೂಗಿನ ತೆಳುವಾದ ಚರ್ಮದ ಮೂಲಕ ಮಾನವ ದೇಹವನ್ನು ಪ್ರವೇಶಿಸುತ್ತವೆ ಮತ್ತು ಮೆದುಳಿನ ಮೇಲೆ ಗಂಭೀರವಾಗಿ ಪರಿಣಾಮ ಬೀರಿ, ಎನ್ಸೆಫಾಲಿಟಿಸ್ಗೆ ಕಾರಣವಾಗಬಹುದು.
ಕಲುಷಿತ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿ ಮತ್ತು ಅಶುದ್ಧ ನೀರಿನಿಂದ ಮುಖ ಮತ್ತು ಬಾಯಿಯನ್ನು ತೊಳೆಯುವುದು ರೋಗವನ್ನು ಉಂಟುಮಾಡಬಹುದು. ಮಳೆ ಪ್ರಾರಂಭವಾದಾಗ ಸ್ಪ್ರಿಂಗ್ ಡ್ರೈನ್‍ಗಳಲ್ಲಿ ಸ್ನಾನ ಮಾಡುವುದನ್ನು ನಿಯಂತ್ರಿಸಬೇಕು. ಚರಂಡಿ ನೀರು ನಿಲ್ಲುವುದನ್ನು ತಪ್ಪಿಸಬೇಕು.