ತಿರುವನಂತಪುರಂ: ಕೆಎಸ್‍ಆರ್‍ಟಿಸಿ ವೇತನ ಸ್ಥಗಿತಕ್ಕೆ ಹಣಕಾಸು ಇಲಾಖೆಯೇ ಕಾರಣ ಎಂದು ಸಾರಿಗೆ ಸಚಿವ ಆಂಟನಿ ರಾಜು ಆರೋಪಿಸಿದ್ದಾರೆ. ವೇತನ ವಿತರಣೆಗೆ ಹಣಕಾಸು ಇಲಾಖೆಯಿಂದ 110 ಕೋಟಿ ಕೋರಿದ್ದರೂ ಮಂಜೂರಾಗಿದ್ದು 30 ಕೋಟಿ ಮಾತ್ರ.
ಆದರೆ ಆ ಮೊತ್ತ ಇನ್ನೂ ಬಂದಿಲ್ಲ, ಲಭ್ಯವಾದ ತಕ್ಷಣ ವಿತರಿಸಲಾಗುವುದು ಎಂದು ಆ್ಯಂಟನಿರಾಜು ತಿಳಿಸಿದರು.
ಎರಡನೇ ಕಂತಿನ ವೇತನ ವಿತರಿಸಬೇಕಾದರೆ ಹೆಚ್ಚುವರಿಯಾಗಿ 40 ಕೋಟಿ ರೂ.ಗಳ ಅಗತ್ಯವಿದೆ ಎಂದು ಸಚಿವರು ಮಾಹಿತಿ ನೀಡಿದರು. ಏತನ್ಮಧ್ಯೆ, ವೇತನ ತಡೆಹಿಡಿಯುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ತಿರುವನಂತಪುರಂನಲ್ಲಿರುವ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದವು. ಪ್ರತಿ ತಿಂಗಳು 5ನೇ ತಾರೀಖಿನಂದು ವೇತನ ವಿತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ನೌಕರರಿಗೆ ಭರವಸೆ ನೀಡಿದರು. ತಿಂಗಳ ಮಧ್ಯಂತರದಲ್ಲಿಯೂ ಮೊದಲ ಕಂತನ್ನು ವಿತರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ.