ಕಾಸರಗೋಡು: 2017ರ ಏಪ್ರಿಲ್‍ನಲ್ಲಿ ನಡೆದ ವಿಶೇಷ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪತ್ತೆಹಚ್ಚಲಾಗಿದ್ದ 1905 ಎಂಡೋಸಲ್ಫಾನ್ ಸಂತ್ರಸ್ತರ ಪೈಕಿ ಸಕಾರಣವಿಲ್ಲದೆ ಪಟ್ಟಿಯಿಂದ ಹೊರಗಿರಿಸಿರುವ 1031 ಮಂದಿಯನ್ನು ಮರುಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಮುಷ್ಕರ ಘೋಷಣಾ ಸಮಾವೇಶ ನಡೆಯಿತು. ಖ್ಯಾತ ಕವಿ ಪ್ರಾಧ್ಯಾಪಕ ವೀರಾನ್‍ಕುಟ್ಟಿ ಸಮಾವೇಶ ಉದ್ಘಾಟಿಸಿದರು.
2019ರ ಜನವರಿಯಲ್ಲಿ ಸೆಕ್ರೆಟರಿಯೇಟ್ ಎದುರು ತಾಯಂದಿರು ನಡೆಸಿರುವ ನಿರಾಹಾರ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜತೆ ನಡೆಸಿದ ಚರ್ಚೆಯಲ್ಲಿ 1031ಮಂದಿ ಸಂತ್ರಸ್ತರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಒಪ್ಪಿಗೆ ನೀಡಲಾಗಿದ್ದು, ವರ್ಷಗಳು ಕಳೆದರೂ ಯಾವುದೇ ತೀರ್ಮಾನಕ್ಕೆ ಬಾರದ ಹಿನ್ನೆಲೆಯಲ್ಲಿ ಮುಷ್ಕರ ಅನಿವಾರ್ಯವಾಗಿದೆ ಎಂದು ಮುಷ್ಕರ ನಿರತರು ಅಭಿಪ್ರಾಯಪಟ್ಟಿದ್ದರೆ. ಎಂಡೋ ಸಂತ್ರಸ್ತರ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಕೀಟನಾಶಕ ಕಂಪನಿಗಳನ್ನು ರಕ್ಷಿಸುವ ಯತ್ನ ನಡೆಯುತ್ತಿದ್ದು, ಸರ್ಕಾರದ ಈ ಧೋರಣೆ ಖಂಡನೀಯ. ಯಾವುದೇ ಬೆಲೆ ತೆತ್ತಾದರೂ ನ್ಯಾಯಯುತ ಬೇಡಿಕೆ ಈಡೇರುವ ವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಅಂಬಿಕಾಸುತನ್ ಮಾಙËಡ್, ಡಾ. ಸುರೇಂದ್ರನಾಥ್, ಎಂಡೋ ವಿರುದ್ಧ ಹೋರಾಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.