ಬದಿಯಡ್ಕ: ಕುಂಬಳೆ ಉಪಜಿಲ್ಲೆಯ ದೇಶಿಯ ಅಧ್ಯಾಪಕ ಪರಿಷತ್ (ಎನ್‍ಟಿಯು) ಕಾರ್ಯಕಾರಿ ಇತ್ತೀಚೆಗೆ ನಡೆಯಿತು. ಕನ್ನಡ ಮಕ್ಕಳಿಗೆ ಕನ್ನಡ ಅರಿಯದ ಅಧ್ಯಾಪಕರು ಪಾಠ ಮಾಡುವುದು ಮಕ್ಕಳ ಕಲಿಕಾ ಹಕ್ಕುಗಳಿಗೆ ವಿರುದ್ಧವಾಗಿದೆ. ಮತ್ತು ಮಕ್ಕಳ ಹಕ್ಕು ಸಂರಕ್ಷಣೆಗೆ ನಿಂತ ಅಧ್ಯಾಪಕನನ್ನು ಅನ್ಯಾಯವಾಗಿ ವರ್ಗಾವಣೆ ಮಾಡುವುದು ಖಂಡನೀಯವಾಗಿದೆ. ಸಂಬಂಧ ಪಟ್ಟವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ಒತ್ತಾಯಿಸಲಾಯಿತು. ಸಭೆಯಲ್ಲಿ ಈ ನಿಟ್ಟಿನ ನಿರ್ಣಯ ಕೈಗೊಳ್ಳಲಾಯಿತು.