ತಿರುವನಂತಪುರಂ: ಕೇರಳ ಪೋಲೀಸರ ಶ್ವಾನದಳದ ಬಿಸ್ಕೀಟ್ ಸಹಿತ ಆಹಾರ ಖರೀದಿಯಲ್ಲಿ ಅವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಶ್ವಾನದಳದ ನೋಡಲ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಸಹಾಯಕ ಕಮಾಂಡೆಂಟ್ ಎ.ಎಸ್.ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಾಯಿಗಳನ್ನು ಖರೀದಿಸಿ ಆಹಾರಕ್ಕಾಗಿ ಬಿಸ್ಕೆಟ್ ಖರೀದಿಯಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿದೆ.
ಸುರೇಶ್ ಕೆಎಪಿ 3ನೇ ಬೆಟಾಲಿಯನ್ ನ ಸಹಾಯಕ ಕಮಾಂಡೆಂಟ್. ವಿಜಿಲೆನ್ಸ್‍ನ ಗುಪ್ತಚರ ವರದಿ ಆಧರಿಸಿ ಅಮಾನತು ಮಾಡಲಾಗಿದೆ. ಉತ್ತರ ಭಾರತದಿಂದ ಹೆಚ್ಚಿನ ಬೆಲೆಗೆ ನಾಯಿಗಳನ್ನು ಖರೀದಿಸಲಾಗಿತ್ತು. ವರದಿಯ ಪ್ರಕಾರ ತಿರುವನಂತಪುರಂನಲ್ಲಿರುವ ಸಂಸ್ಥೆಯೊಂದರಿಂದ ನಾಯಿಗಳಿಗೆ ಆಹಾರ ಪದಾರ್ಥಗಳನ್ನು ಹೆಚ್ಚಿನ ದರದಲ್ಲಿ ಖರೀದಿಸಲಾಗಿದೆ.
ಮೇಲಧಿಕಾರಿಗಳ ಗಮನಕ್ಕೆ ಬಾರದೆ ವೈದ್ಯರನ್ನು ನೇಮಕ ಮಾಡಿರುವುದು ಕೂಡ ಪತ್ತೆಯಾಗಿದೆ. ಘಟನೆಯ ಕುರಿತು ವಿಜಿಲೆನ್ಸ್ ವಿಸ್ತೃತ ತನಿಖೆ ನಡೆಸಲಿದೆ.