ಕಾಸರಗೋಡು: ಮಣಿಪುರ ಹಿಂಸಾಕಾಂಡದ ವಿರುದ್ಧ ಕಾಞಂಗಾಡಿನಲ್ಲಿ ಮುಸ್ಲಿಂಲೀಗ್ ಆಯೋಜಿಸಿದ್ದ ರ್ಯಾಲಿಯಲ್ಲಿ ಕೋಮುದ್ವೇಷ ಪ್ರಚೋದಿಸುವ ಘೋಷಣೆ ಮೊಳಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಐದುಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇವರಿಗೆ ನ್ಯಾಐಆಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ. ಕಲ್ಲೂರಾವಿ ನಿವಾಸಿ ಅಬ್ದುಲ್ ಸಲಾಂ(18), ಶರೀಫ್(38), ಕಾಳಿಚ್ಚನಡ್ಕ ನಿವಸಿ ಆಶಿರ್(25), ಇಕ್ಬಾಲ್ ರಸ್ತೆಯ ಪಿ.ಎಚ್ ಆಯೂಬ್(45), ಹಾಗೂ ಪಡನ್ನಕ್ಕಾಡ್ ನಿವಾಸಿ ಪಿ.ಮಹಮ್ಮದ್‍ಕುಞÂ(55)ಎಂಬವರಿಗೆ ನ್ಯಾಯಾಂಗಬಂಧನದಲ್ಲಿರುವ ಆರೋಪಿಗಳು.
ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುವ ರೀತಿಯಲ್ಲಿ ಘೋಷಣೆಗಳನ್ನು ಕೂಗಲಾಗಿದ್ದು, ಪ್ರಕರಣದಲ್ಲಿ 300ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ತಲೆಮರೆಸಿಕೊಮಡಿರುವ ಆರೋಪಿಗಳ ಪತ್ತೆಗೆ ಪೊಲೀಸ್ ವಿಶೇಷ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಎಲ್ಲ ಸಮುದಾಯದ ಜನರೊಂದಿಗೆ ಶಾಂತಿ ಕಾಪಾಡಲು ಮನವಿ ಮಾಡಲಾಗಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡು ಕೋಮು ದ್ವೇಷ ಹರಡುವ ರೀತಿಯ ಘೋಷಣೆ ಮೊಳಗಿಸಿದವರಿಗೆ ನಿಷೇಧಿತ ಸಂಘಟನೆಗಳ ಜತೆ ನಂಟು ಹೊಂದಿರುವ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಸೈಬರ್ ಕೇಸು:
ಪ್ರಕರಣದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕೋಮು ಪ್ರಚೋದಕ ಸಂದೇಶ ರವಾನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಠಾಣೆ ಪೊಲೀಸರು ಪ್ರತ್ಯೇಕ ಕೇಸು ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲ ತಾಣಗಳ ಪ್ರೊಫೈಲ್ ಪರಿಶೀಲಿಸಿ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಸಾಮಾಜಿಕ ಜಾಲ ತಾಣಗಳ ಮೂಲಕ ಕೋಮು ದ್ವೇಷ ಹರಡುವ ರೀತಿಯ ಬರವಣಿಗೆ ರವಾನಿಸಿದಲ್ಲಿ ಇವರ ವಿರುದ್ಧ ಜಾಮೀನುರಹಿತ ಕೇಸು ದಾಖಲಿಸಿಕೊಳ್ಳುವುದರ ಜತೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಸೈಬರ್ ಪೊಲೀಸರ ತಂಡ ಪ್ರತ್ಯೇಕವಾಗಿ ಕಾರ್ಯಾಚರಿಸುತ್ತಿದೆ ಎಂದು ತಿಳಿಸಿದರು.