ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿವಾಹಿನಿಯ ನೇತೃತ್ವದಲ್ಲಿ ಶ್ರೀರಾಮ ನೈವೇದ್ಯದ ಭತ್ತದ ಕೃಷಿಯ ನೇಜಿ ನೆಡುವ ಕಾರ್ಯ ಶುಕ್ರವಾರ ಏತಡ್ಕ ಬಾಳೆಹಿತ್ತಿಲಲ್ಲಿ ನಡೆಯಿತು. ಪ್ರತೀವರ್ಷ ಗದ್ದೆ ಬೇಸಾಯವನ್ನು ಮಾಡುತ್ತಿರುವ ಕೃಷಿಕ, ಪತ್ರಕರ್ತ ಚಂದ್ರಶೇಖರ ಏತಡ್ಕ ಅವರು ಈ ಬಾರಿ ತಮ್ಮ ಗದ್ದೆಯ ಒಂದಷ್ಟು ಸ್ಥಳವನ್ನು ಶ್ರೀರಾಮ ನೈವೇದ್ಯಕ್ಕೆ ಬಿಟ್ಟುಕೊಟ್ಟಿದ್ದರು. ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಭಿಕ್ಷೆ, ಶ್ರೀರಾಮ ದೇವರ ನೈವೇದ್ಯಕ್ಕೆ ಈ ಅಕ್ಕಿಯು ಉಪಯೋಗವಾಗುತ್ತದೆ. ಕಾರ್ಯಕ್ರಮಕ್ಕೆ ಮೊದಲು ಆಟಿಗಂಜಿ ವಿತರಿಸಲಾಯಿತು. ಜೀವನಬೋಧೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಕೆಸರುಗದ್ದೆಯಲ್ಲಿ ವಿವಿಧ ಆಟಗಳನ್ನು ಆಡಿದರು. ಕೊನೆಗೆ ನೇಜಿಯನ್ನು ನೆಟ್ಟು ಸಂಭ್ರಮಿಸಿದರು.
ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಡಾ. ವೈ.ವಿ.ಕೃಷ್ಣಮೂರ್ತಿ, ಮಂಡಲ ಕೋಶಾಧಿಕಾರಿ ಹರಿಪ್ರಸಾದ ಪೆರ್ಮುಖ, ಮಾತೃತ್ವಂನ ಈಶ್ವರಿ ಬೇರ್ಕಡವು, ಕುಸುಮ ಪೆರ್ಮುಖ, ಗೀತಾಲಕ್ಷ್ಮೀ ಮುಳ್ಳೇರಿಯ, ಗಣೇಶ ಮುಣ್ಚಿಕ್ಕಾನ, ನವನೀತ ಕೈಪಂಗಳ, ವೈ.ಕೆ.ಗಣಪತಿ ಭಟ್, ಡಾ. ಪ್ರಕಾಶ್ ವೈ.ಎಚ್., ಸುಬ್ರಹ್ಮಣ್ಯ ಭಟ್ ಏತಡ್ಕ, ಚಂದ್ರಶೇಖರ ಏತಡ್ಕ, ಶ್ಯಾಮಪ್ರಸಾದ ಕುಳಮರ್ವ, ಕೇಶವಪ್ರಸಾದ ಎಡೆಕ್ಕಾನ, ಈಶ್ವರ ಭಟ್ ಬದಿಯಡ್ಕ ಪಾಲ್ಗೊಂಡಿದ್ದರು. ಡಾ. ಅನ್ನಪೂರ್ಣ ಏತಡ್ಕ ನೇತೃತ್ವದಲ್ಲಿ ಓಬೇಲೆ ಹಾಡಿಗೆ ಮಹಿಳೆಯರು ದನಿಗೂಡಿಸಿದರು. ಡಾ. ಶಿವಕುಮಾರ ಅಡ್ಕ ಆಟಿ ತಿಂಗಳಿನಲ್ಲಿ ಸೇವಿಸಬೇಕಾದ ಆಹಾರ ಪದ್ಧತಿಯ ಕುರಿತು ತರಗತಿಯನ್ನು ನಡೆಸಿಕೊಟ್ಟರು.