ಇಂಫಾಲ: ಹಾಡಿನ ಮೂಲಕ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ 'ಝೋಮಿ ಸ್ಟೂಡೆಂಟ್ ಫೆಡರೇಶನ್' (ಝೆಡ್‌ಎಸ್‌ಎಫ್) ಮಣಿಪುರದ ಜನಪ್ರಿಯ ಗಾಯಕ ಜಾಯೆಂತ ಲೌಕ್ರಕ್ಪಂ (ತಪ್ತ) ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಇಂಫಾಲ: ಹಾಡಿನ ಮೂಲಕ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ 'ಝೋಮಿ ಸ್ಟೂಡೆಂಟ್ ಫೆಡರೇಶನ್' (ಝೆಡ್‌ಎಸ್‌ಎಫ್) ಮಣಿಪುರದ ಜನಪ್ರಿಯ ಗಾಯಕ ಜಾಯೆಂತ ಲೌಕ್ರಕ್ಪಂ (ತಪ್ತ) ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಜುಲೈ 13 ರಂದು ಚುರಾಚಂದ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ ಝೆಡ್‌ಎಸ್‌ಎಫ್ ಅಧ್ಯಕ್ಷ ನೆಂಗ್ಜಾಲಿಯನ್ ಟೋನ್ಸಿಂಗ್, 'ತಪ್ತ ಅವರು ತಮ್ಮ ಹಾಡಿನ ಮೂಲಕ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ.
ತಪ್ತ ಅವರು ಮಣಿಪುರದ ಜನಪ್ರಿಯ ಗಾಯಕರಾಗಿದ್ದು, 'ಪವರ್ ಆಫ್ ಅಟ್ರಾಕ್ಷನ್' ಎಂಬ ಆಲ್ಬಂ ಮೂಲಕ ವ್ಯಾಪಕ ಜನಪ್ರಿಯತೆ ಗಳಿಸಿದ್ದರು. ಆ ಮೂಲಕ ಅಭಿಮಾನಿಗಳ ಬಳಗವೊಂದನ್ನು ಸಂಪಾದಿಸಿದ್ದರು.
ಮೇ 3ರಿಂದ ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾಗಿದ್ದು, ಎರಡು ಸಮುದಾಯಗಳ(ಮೈತೇಯಿ ಮತ್ತು ಕುಕಿ) ನಡುವೆ ಸಮನ್ವಯತೆ ಕಾಪಾಡಲು ಸರ್ಕಾರ ಹೆಣಗಾಡುತ್ತಿದೆ. ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಸುಮಾರು 150 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.